ಮನೆ ಕಳವು: ಅಂತಾರಾಜ್ಯ ಕಳ್ಳನ ಸೆರೆ; ಆರೋಪಿ 20ರಷ್ಟು ಕಳವು ಪ್ರಕರಣಗಳಲ್ಲಿ ಭಾಗಿ
ಕುಂಬಳೆ: ಬೇಕೂರಿನಲ್ಲಿ ಮನೆಗೆ ನುಗ್ಗಿ ಐಫೋನ್ ಹಾಗೂ ವಿವಿಧ ವಸ್ತು ಗಳನ್ನು ಕಳವು ನಡೆಸಿದ ಆರೋಪಿ ಯನ್ನು ಕುಂಬಳೆ ಪೊಲೀಸರು ಬಂಧಿಸಿ ದ್ದಾರೆ. ಬಂದ್ಯೋಡು ಅಡ್ಕ ನಿವಾಸಿ ಯೂ, ಪ್ರಸ್ತುತ ಕರ್ನಾಟಕದ ಪರಂಗಿ ಪೇಟೆಯಲ್ಲಿ ವಾಸಿಸುವ ಅಶ್ರಫ್ ಅಲಿ (25) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಕುಂಬಳೆ ಪೊಲೀಸ್ ಠಾಣೆಯ ಎಸ್.ಐ. ಟಿ.ಎಂ. ವಿಪಿನ್ ನೇತೃತ್ವದ ಪೊಲೀಸರು ಈತನನ್ನು ಕರ್ನಾಟಕದಿಂದ ಬಂಧಿಸಿದ್ದಾರೆ.
ಬೇಕೂರು ಸುಭಾಶ್‌ನಗರ ಜಿಲಾನಿ ಮಂಜಿಲ್‌ನ ಆಯಿಷ ಯೂಸಫ್ ಎಂಬವರ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ 1 ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ ಐಫೋನ್ ಹಾಗೂ ವಿವಿಧ ಸಾಮಗ್ರಿಗಳನ್ನು ಆರೋಪಿ ಅಶ್ರಫಲಿ ಕಳವು ನಡೆಸಿದ್ದಾನೆನ್ನಲಾಗಿದೆ. ಈ ತಿಂಗಳ 4ರಂದು ಈ ಕಳವು ನಡೆದಿತ್ತು. ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿಕೊಂಡ ಪೊಲೀಸರು ವಿವಿಧೆಡೆ ಶೋಧ ನಡೆಸುತ್ತಿದ್ದರು. ಆದರೆ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಈತನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಂಕಾಲ್‌ನ ಮನೆಯೊಂದ ರಿಂದ ಕೆಲವು ದಿನಗಳ ಹಿಂದೆ ಕಳವು ನಡೆದಿದ್ದು, ಇದು ಕೂಡಾ ಈತನ ಕೃತ್ಯವೇ ಆಗಿರಬಹುದೆಂದು ಪೊಲೀಸರು ಸಂಶಯಿಸುತ್ತಿದ್ದಾರೆ. ಬದಿಯಡ್ಕ, ಮಂಜೇಶ್ವರ, ಕಾಸರಗೋಡು, ಬೇಕಲ, ಬಂಟ್ವಾಳ, ಕೋಣಾಜೆ ಎಂಬೀ ಠಾಣೆಗಳಲ್ಲಾಗಿ ಸುಮಾರು 20ರಷ್ಟು ಪ್ರಕರಣಗಳಲ್ಲಿ ಬಂಧಿತ ಅಶ್ರಫ್ ಅಲಿ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತನ ಜತೆಗೆ ಕಳವು ಪ್ರಕರಣಗಳಲ್ಲಿ ಭಾಗಿಯಾದ ಇನ್ನೂ ಮೂರು ಮಂದಿ ಆರೋಪಿಗಳಿದ್ದಾರೆ. ಅವರನ್ನೂ ಬಂಧಿಸಲಿರುವ ಕಾರ್ಯಾಚರಣೆ ಆರಂಭಿಸಲಾಗಿದೆ. ಅವರ ಬಂಧನವಾಗು ವುದರೊಳಗೆ ಕುಂಬಳೆ ಠಾಣೆ ವ್ಯಾಪಿ ಯಲ್ಲಿ ನಡೆದ ಇನ್ನಷ್ಟು ಕಳವು ಪ್ರಕರಣ ಗಳು ಬೆಳಕಿಗೆ ಬರಲಿವೆ ಎಂದು ಪೊಲೀ ಸರು ತಿಳಿಸಿದ್ದಾರೆ. ಬಂಧಿತ ಅಶ್ರಫ್ ಅಲಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇದೇ ವೇಳೆ ಕುಂಬಳೆ ಹಾಗೂ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿವಿಧ ಕಳವು ಪ್ರಕರಣಗಳಲ್ಲಿ ತನಿಖೆ ನಡೆಸುವ ಅಂಗವಾಗಿ ಅಶ್ರಫ್ ಅಲಿಯನ್ನು ಕಸ್ಟಡಿಗೆ ತೆಗೆಯಲು ಪೊಲೀಸರು ನಿರ್ಧರಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.