ಮನೆ ಕಳವು: ರಿಮಾಂಡ್‌ನಲ್ಲಿರುವ ಆರೋಪಿಯನ್ನು ಕಸ್ಟಡಿಗೆ ತೆಗೆದು ಸಮಗ್ರ ತನಿಖೆ

ಕುಂಬಳೆ: ಮನೆಯ ಬಾಗಿಲು ಮುರಿದು ಒಳನುಗ್ಗಿ ಐ ಫೋನ್ ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಕುಂಬಳೆ ಪೊಲೀ ಸರು ಎರಡು ದಿನಗಳ ಕಾಲಕ್ಕೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಬಂದ್ಯೋಡು ಅಡ್ಕ ನಿವಾಸಿ ಅಶ್ರಫ್ ಅಲಿ (25) ಎಂಬಾತನನ್ನು ಕಸ್ಟಡಿಗೆ ಪಡೆದು ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

ಬೇಕೂರು ಸುಭಾಶ್‌ನಗರದಲ್ಲಿ ಆಯಿಶಾ ಯೂಸಫ್ ಎಂಬವರ ಮನೆಯಿಂದ ಕಳೆದ ಜೂನ್ ೪ರಂದು ಒಂದು ಐಫೋನ್ ಕಳವುಗೀಡಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಕುಂಬಳೆ ಪೊಲೀಸರು ತನಿಖೆ ನಡೆಸಿದಾಗ  ಆರೋಪಿ ಅಶ್ರಫ್ ಅಲಿ ಎಂದು ತಿಳಿದುಬಂದಿದೆ. ಒಂದು ವಾರ ಹಿಂದೆ ಈತನನ್ನು ಪೊಲೀಸರು  ಬಂಧಿಸಿದ್ದರು. ಈತನನ್ನು ತನಿಖೆಗೊಳಪಡಿಸಿದಾಗ ಕುಂಬಳೆ, ಕಾಸರಗೋಡು, ಬೇಕಲ ಹಾಗೂ ಕರ್ನಾಟಕದ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತನ ವಿರುದ್ಧ ಕಳವು ಕೇಸು ದಾಖಲಾಗಿರು ವುದು ತಿಳಿದುಬಂದಿದೆ. ಇದೇ ವೇಳೆ ಸೋಂ ಕಾಲ್‌ನಲ್ಲೂ  ಮನೆಯೊಂದ ರಿಂದ ಈ ಹಿಂದೆ ಕಳವು ನಡೆದಿತ್ತು. ಇದು ಕೂಡಾ ಅಶ್ರಫ್  ಅಲಿಯ ಕೃತ್ಯವಾ ಗಿದೆಯೇ ಎಂದು ತಿಳಿಯಲಾ ಗು ವುದು. ಅಲ್ಲದೆ ಕುಂಬಳೆಯಲ್ಲಿ ನಡೆದ ಇನ್ನಿತರ ಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆಯೇ ಎಂದು ತಿಳಿಯಲು ಕಸ್ಟಡಿಗೆ ತೆಗೆದುಕೊಂಡಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.  ಇದೇ ವೇಳೆ ಮನೆ ಕಳವು ಪ್ರಕರಣದಲ್ಲಿ ಅಶ್ರಫ್ ಅಲಿಯೊಂದಿಗೆ ಇತರ ಮೂರು ಮಂದಿ ಭಾಗಿಯಾಗಿದ್ದು ಅವರ ಕುರಿತಾಗಿ ಮಾಹಿತಿ ಸಂಗ್ರಹಿಸಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page