ಮನೆ ಕೊಠಡಿಯಲ್ಲಿ ಯುವತಿ ಕೊಲೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆ: ಪತಿ ಬಂಧನ

ಕಾಸರಗೋಡು: ಮನೆಯ ಮಲ ಗುವ ಕೊಠಡಿಯೊಳಗೆ ಯುವತಿ ಕೊಲೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾ ಗಿದ್ದು, ಅದಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಸದುರ್ಗ ಅಂಬಲತರ ಪಾರುಪಳ್ಳ ಕಣ್ಣೋತ್ತ್ ಕಕ್ಕಾಡ್ ಭಜನಾ ಮಂದಿರ ಬಳಿಯ ಎಂ.ಟಿ. ಬೀನ (40) ಕೊಲೆಗೈಯ್ಯಲ್ಪಟ್ಟ ಯುವತಿ. ಇದಕ್ಕೆ ಸಂಬಂಧಿಸಿ ಆಕೆಯ ಪತಿ ಕೆ. ದಾಮೋದರನ್ (48)ನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಮುಂಜಾನೆ ಈ ಘಟನೆ ನಡೆದಿದೆ. ಕೌಟುಂಬಿಕ ಕಲಹವೇ ಕೊಲೆಗೆ ಕಾರಣವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಬೀನಾರ ಕುತ್ತಿಗೆ ಹಿಚುಕಿ ಹಾಗೂ ತಲೆಯನ್ನು ಗೋಡೆಗೆ ಬಡಿದು ಕೊಲೆಗೈಯ್ಯಲಾಗಿ ತ್ತೆಂದು ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೈದ ಬಳಿಕ ಆರೋಪಿ ದಾಮೋದರನ್ ಆ ವಿಷಯವನ್ನು ಸಂಬಂಧಿಕರಲ್ಲಿ ತಿಳಿಸಿದ್ದನು. ನಂತರ ಅಲ್ಲಿಂದ ನೇರವಾಗಿ  ಪೊಲೀಸ್ ಠಾಣೆಯಲ್ಲಿ ಶರಣಾಗಲೆಂದು ಬರುತ್ತಿದ್ದ ದಾರಿ ಮಧ್ಯೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗೈಯ್ಯಲ್ಪಟ್ಟ ಬೀನಾ ಹೊಸದುರ್ಗ ಮೂನಾಂಮೈಲು ಹುರಿಹಗ್ಗ ಕಾರ್ಖಾನೆಯೊಂದರ ಕಾರ್ಮಿಕೆಯಾಗಿದ್ದರು. ರಾಮನ್- ಚಿಟ್ಟು ದಂಪತಿ ಪುತ್ರಿಯಾಗಿರುವ ಬೀನಾ, ಪುತ್ರ ವಿಶಾಲ್, ಸಹೋದರಿ ಪುಷ್ಪ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪ, ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್, ಅಂಬಲತರ ಇನ್ಸ್‌ಪೆಕ್ಟರ್ ಟಿ. ದಾಮೋದರನ್ ಮೊದಲಾದವರು ಕೊಲೆ ನಡೆದ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಫೋರೆನ್ಸಿಕ್ ವಿಭಾಗದವರು ಸ್ಥಳಕ್ಕೆ ಆಗಮಿಸಿ ಅಗತ್ಯದ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.  ದೇಹವನ್ನು ನಂತರ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

You cannot copy contents of this page