ಮನೆ ಬಳಿಯ ಶೆಡ್‌ನಿಂದ ೧೧,೭೩೩ ಪ್ಯಾಕೆಟ್ ಪಾನ್ ಮಸಾಲೆ ವಶ: ಓರ್ವ ಸೆರೆ

ಉಪ್ಪಳ: ಮನೆ ಬಳಿಯ ಶೆಡ್‌ನಲ್ಲಿ ದಾಸ್ತಾನಿರಿಸಿದ್ದ ೧೧,೭೩೩ ಪ್ಯಾಕೆಟ್ ಪಾನ್ ಮಸಾಲೆಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿ, ಓರ್ವನನ್ನು ಬಂಧಿಸಿದ್ದಾರೆ. ಉಪ್ಪಳ ಪತ್ವಾಡಿ ರಸ್ತೆಯ ಮುಹಮ್ಮದ್ ಕೆ (೪೯) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈತನ ಮನೆ ಹಿತ್ತಿಲಿನಲ್ಲಿರುವ ಶೆಡ್‌ನಲ್ಲಿ  ಕೇರಳದಲ್ಲಿ ನಿಷೇಧ ಹೇರಲಾದ ಪಾನ್ ಮಸಾಲೆಗಳನ್ನು ಹದಿನೈದು ಗೋಣಿ ಚೀಲಗಳಲ್ಲಿ  ತುಂಬಿಸಿಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಎಸ್‌ಐಗಳಾದ ಅನ್ಸಾರ್, ನಿಖಿಲ್, ಸ್ಪೆಷಲ್ ಬ್ರಾಂಚ್‌ನ ಪೊಲೀಸ್ ಅಧಿಕಾರಿ ಪ್ರದೀಶ್ ಗೋಪಾಲ್ ಎಂಬಿವರು ನಿನ್ನೆ ಸಂಜೆ ಕಾರ್ಯಾಚರಣೆ ನಡೆಸಿ ಪಾನ್ ಮಸಾಲೆ ವಶಪಡಿಸಿದ್ದಾರೆ. ಪಾನ್ ಮಸಾಲೆಗಳನ್ನು ಇಲ್ಲಿ ದಾಸ್ತಾನಿರಿಸಿ ವಿವಿಧೆಡೆಗೆ ಸಾಗಿಸಲು ಉದ್ದೇಶಿಸಲಾಗಿತ್ತೆಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page