ಮನೆ ಬಳಿಯ ಶೆಡ್ ಬೆಂಕಿಗಾಹುತಿ: ಅಪಾರ ನಾಶನಷ್ಟ
ಉಪ್ಪಳ: ಮನೆ ಬಳಿಯ ಶೆಡ್‌ಗೆ ಬೆಂಕಿ ತಗಲಿ ಅಪಾರ ನಾಶ-ನಷ್ಟವುಂ ಟಾದ ಘಟನೆ ನಡೆದಿದೆ. ಹೊಸಂಗಡಿ ಬಳಿಯ ಪೊಸೋಟು ಚಾದಿಪಡ್ಪು ಎಂಬಲ್ಲಿನ ಮೊಹಮ್ಮದ್ ಹನೀಫ್ ಎಂಬವರ ಮನೆ ಬಳಿಯ ಕಾಂಕ್ರೀಟ್ ಶೆಡ್ ನಿನ್ನೆ ರಾತ್ರಿ ೭.೩೦ರ ವೇಳೆ ಬೆಂಕಿಗಾಹುತಿಯಾಗಿದೆ. ಶೆಡ್‌ನಲ್ಲಿದ್ದ ಕಟ್ಟಿಗೆ, ತೆಂಗಿನಕಾಯಿ ಸಹಿತ ವಿವಿಧ ಸಾಮಗ್ರಿಗಳು ಉರಿದು ನಾಶಗೊಂಡಿದೆ. ಉಪ್ಪಳದಿಂದ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಳ್ಳ ಲು ಕಾರಣವೆಂದು ಹೇಳಲಾಗುತ್ತಿದೆ.