ಮಯ್ಯಾಳದಲ್ಲಿ ಕಾಡಾನೆ ದಾಳಿ:ಹಲವು ಪ್ರದೇಶಗಳ ಕೃಷಿ ನಾಶ

ಅಡೂರು: ದೇಲಂಪಾಡಿ ಪಂಚಾಯತ್ ವ್ಯಾಪ್ತಿಯ ಮಯ್ಯಾಳದಲ್ಲಿ ಇದೇ ಮೊದಲ ಬಾರಿಗೆ ಕಾಡಾನೆ ದಾಳಿ ನಡೆದಿದೆ. ಇಂದು ಮುಂಜಾನೆ 1 ಗಂಟೆ ಬಳಿಕ ಇಲ್ಲಿನ ಹಲವು ಪ್ರದೇಶಗಳ ತೋಟಗಳಿಗೆ ಕಾಡಾನೆ ನುಗ್ಗಿದೆ. ತೆಂಗು, ಕಂಗು, ಬಾಳೆ ಸಹಿತ ವ್ಯಾಪಕ ಕೃಷಿಯನ್ನು ಕಾಡಾನೆ ನಾಶಗೊಳಿಸಿದೆ. ಮಧ್ಯರಾತ್ರಿ ಬಳಿಕ ತೋಟದಿಂದ ಶಬ್ದ ಕೇಳಿ ಬಂದಿತ್ತು. ಈ ವೇಳೆ ನೋಡಿದಾಗ ಕಾಡಾನೆ ಕಂಡು ಬಂದಿದೆ. ಇಂದು ಬೆಳಗಾಗುವಷ್ಟರಲ್ಲಿ ಹಲವು ಮಂದಿಯ ತೋಟಕ್ಕೆ ಕಾಡಾನೆ ನುಗ್ಗಿ ವ್ಯಾಪಕ ನಾಶಗೊಳಿಸಿರುವುದು ತಿಳಿದು ಬಂದಿದೆ. ಮಯ್ಯಾಳ ಹಾಗೂ  ಪರಿಸರ ಪ್ರದೇಶಕ್ಕೆ ಇದೇ ಮೊದಲ ಬಾರಿಗೆ ಕಾಡಾನೆ ತಲುಪಿವೆ ಎಂದು ಇಲ್ಲಿನ ಕೃಷಿಕ ಸದಾನಂದ ಪೂಜಾರಿ ತಿಳಿಸಿದ್ದಾರೆ. ಇವರ ತೋಟದಲ್ಲೂ ಆನೆ ನುಗ್ಗಿ ವ್ಯಾಪಕ ಹಾನಿಗೊಂಡಿದೆ. ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಈ ಹಿಂದೆ ಕಾಡಾನೆಗಳು ದಾಳಿ ನಡೆಸಿ ವ್ಯಾಪಕ ಕೃಷಿ ನಾಶಗೊಳಿಸಿದ್ದವು.

You cannot copy contents of this page