ಕಾಸರಗೋಡು: ಮರು ವಿವಾಹ ಭರವಸೆ ನೀಡಿ ವೈದ್ಯನಿಂದ ಐದೂವರೆ ಲಕ್ಷ ರೂಪಾಯಿ, ಮೊಬೈಲ್ ಫೋನ್ ಹಾಗೂ ಆಭರಣಗಳನ್ನು ಲಪಟಾಯಿ ಸಿದ ಪ್ರಕರಣದಲ್ಲಿ ಮತ್ತಿಬ್ಬರು ಸೆರೆಗೀಡಾ ಗಿದ್ದಾರೆ. ಕೊಡಗು ನಿವಾಸಿ ಮಜೀದ್, ಮಲಪ್ಪುರಂ ಮೇಲಾಟೂರ್ ನಿವಾಸಿ ಸಲೀಂ ಎಂಬಿವರನ್ನು ಕಲ್ಲಿಕೋಟೆ ನಡಕ್ಕಾವು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಒಂದನೇ ಆರೋಪಿ ಯಾದ ಕಾಸರಗೋಡು ನಿವಾಸಿ ಇರ್ಷಾನ ಎಂಬಾಕೆಯನ್ನು ಈ ಹಿಂದೆ ಬಂಧಿಸ ಲಾಗಿತ್ತು. ಇದೀಗ ಸೆರೆಗೀಡಾದ ವರು ವಿವಾಹ ಭರವಸೆ ನೀಡಿ ಹಣ ಲಪಟಾಯಿಸಿದ ಯುವತಿಯ ಸಹಚರರಾಗಿದ್ದಾರೆ. ತಿರುವನಂತಪುರ ಜಿಲ್ಲೆಯ ನಿವಾಸಿಯಾದ ವೈದ್ಯ ತನಗುಂಟಾದ ವಂಚನೆ ಬಗ್ಗೆ ದೂರು ನೀಡಿದ್ದರು. ಫಾರೆನ್ಸಿಕ್ ಸರ್ವೀಸ್ ನಿಂದ ಇವರು ನಿವೃತ್ತಿ ಹೊಂದಿದ್ದಾರೆ. ಸೆರೆಗೀಡಾದ ಆರೋಪಿಗಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಮರು ವಿವಾಹಕ್ಕಾಗಿ ವೈದ್ಯ ಪತ್ರಿಕೆ ಯಲ್ಲಿ ಜಾಹೀರಾತು ನೀಡಿದ್ದರು. ಈ ಜಾಹೀರಾತನ್ನು ಕಂಡ ಆರೋಪಿಗಳು ವಂಚನೆ ನಡೆಸಲು ಯೋಜನೆ ಹಾಕಿಕೊಂಡಿದ್ದರು. ಕಾಸರಗೋಡು ನೀಲೇಶ್ವರ ನಿವಾಸಿಯಾದ ಇರ್ಷಾನ ವೈದ್ಯನೊಂದಿಗೆ ಪರಿಚಯಗೊಂಡಳು. ಅನಂತರ ಮದುವೆಗೂ ತೀರ್ಮಾನಿಸ ಲಾಯಿತು. ಇರ್ಷಾನಳಿಗೆ ವಾಸಿಸಲು ಕಲ್ಲಿಕೋಟೆಯಲ್ಲಿ ಮನೆ ಖರೀದಿಸಲು ವೈದ್ಯ ೫ ಲಕ್ಷ ರೂಪಾಯಿ ವೈದ್ಯ ನೀಡಿದರು. ಆ ಮನೆಯನ್ನು ನೋಡಲು ತೆರಳುತ್ತಿದ್ದ ವೇಳೆ ವೈದ್ಯನ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮೊದಲಾದವುಗಳನ್ನು ತಂಡ ಲಪಟಾಯಿಸಿತ್ತು. ಕಳೆದ ಫೆಬ್ರವರಿ ೮ರಂದು ಈ ಘಟನೆ ನಡೆದಿ ದ್ದು, ಈ ಬಗ್ಗೆ ಲಭಿಸಿದ ದೂರಿನಂತೆ ತನಿಖೆ ನಡೆಸಿದ ಪೊಲೀಸರು ಇರ್ಷಾನಳನ್ನು ಬಂಧಿಸಿದ್ದರು. ಆದರೆ ಪ್ರಕರಣದ ಇತರ ಆರೋಪಿಗಳಾದ ಕೊಡಗು ನಿವಾಸಿ ಮಜೀದ್, ಮಲಪ್ಪುರಂ ನಿವಾಸಿ ಸಲೀಂ ತಲೆಮರೆಸಿಕೊಂಡಿದ್ದರು. ಸೈಬರ್ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ಕಾಸರಗೋಡಿನಿಂದ ಈ ಇಬ್ಬರನ್ನು ಸೆರೆಹಿಡಿಯಲಾಗಿದೆ. ವಂಚನೆಗೊಳಗಾದ ವೈದ್ಯ ಆರೋಪಿಗಳ ಗುರುತುಹಚ್ಚಿದ್ದಾರೆ.
