ಮಲಪ್ಪುರಂ ಮಾಜಿ ಎಸ್‌ಪಿ ಲೈಂಗಿಕ ದೌರ್ಜನ್ಯ ಗೈದಿರುವುದಾಗಿ ಯುವತಿ ಆರೋಪ: ನಿಷೇಧಿಸಿದ ಸುಜಿತ್‌ದಾಸ್

ಮಲಪ್ಪುರಂ: ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಯುವತಿಯೋರ್ವೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಾಳೆ. ಮಲಪ್ಪುರಂನ ಮಾಜಿ ಎಸ್‌ಪಿ ಸುಜಿತ್ ದಾಸ್ ವಿರುದ್ಧ ಈ ಆರೋಪ ಹೊರಿಸಲಾಗಿದೆ. ಸುಜಿತ್‌ದಾಸ್ ಹಾಗೂ ಎಸ್.ಎಚ್.ಒ ಆಗಿದ್ದ ವಿನೋದ್ ಎಂಬಿವರು ತನಗೆ ಲೈಂಗಿಕ ದೌರ್ಜನ್ಯಗೈದುದಾಗಿ ಯುವತಿ ಆರೋಪಿಸಿದ್ದಾಳೆ. ಎಸ್.ಪಿ. ಸುಜಿತ್‌ದಾಸ್ ಎರಡು ಬಾರಿ ದೌರ್ಜನ್ಯಗೈದಿದ್ದು, ಈ ಬಗ್ಗೆ ದೂರು ನೀಡದಂತೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ. ಎರಡನೇ ಬಾರಿ ದೌರ್ಜನ್ಯಗೈಯ್ಯುವಾಗ ಕಸ್ಟಮ್ಸ್‌ನ ಓರ್ವ ಅಧಿಕಾರಿಯೂ ಅವರ ಜತೆಗಿದ್ದರು. ಆತನೊಂದಿಗೂ ಸಹಕರಿಸಬೇಕೆಂದು ಒತ್ತಾಯಿಸಿರು ವುದಾಗಿ ಯುವತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿದೆ. ದೂರೊಂದಕ್ಕೆ ಸಂಬಂಧಿಸಿ ಎರಡು ಬಾರಿ ಸುಜಿತ್‌ದಾಸ್‌ರನ್ನು ಭೇಟಿಯಾಗಿದ್ದು, ಈ ವೇಳೆ ದೌರ್ಜನ್ಯಗೈದುದಾಗಿ ಆರೋಪಿಸಲಾಗಿದೆ. ಇದೇ ವೇಳೆ ಯುವತಿಯ ಆರೋಪವನ್ನು ಎಸ್‌ಪಿ ಸುಜಿತ್ ದಾಸ್ ತಳ್ಳಿ ಹಾಕಿದ್ದಾರೆ. ಯುವತಿಯ ಆರೋಪ ಸುಳ್ಳು ಅದರ ಹಿಂದೆ ಭಾರೀ ನಿಗೂಢತೆ ಇದೆ. ಆರೋಪವನ್ನು ಕಾನೂನು ರೀತಿಯಲ್ಲಿ ಎದುರಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ನಿರಂತರ ದೂರು ನೀಡುವ ಯುವತಿ ಈಗ ಆರೋಪದೊಂದಿಗೆ ರಂಗಕ್ಕೆ ಬಂದಿರುವುದಾಗಿಯೂ ಸುಜಿತ್ ದಾಸ್ ತಿಳಿಸಿದ್ದಾರೆ. ಪಿ.ವಿ. ಅನ್ವರ್‌ನ ಆರೋಪಗಳ ಹಿನ್ನೆಲೆಯಲ್ಲಿ ಸುಜಿತ್‌ದಾಸ್ ಅಮಾನತಿನಲ್ಲಿದ್ದಾರೆ. ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಇವರನ್ನು ಅಮಾನತುಗೊಳಿಸಲಾಗಿದೆ.

You cannot copy contents of this page