ಮಲಯಾಳಂ ಸಿನಿಮಾದ ಅಮ್ಮ ಕವಿಯೂರು ಪೊನ್ನಮ್ಮ ಇನ್ನಿಲ್ಲ
ಕೊಚ್ಚಿ: ಮಲಯಾಳಂ ಸಿನಿಮಾದ ಅಮ್ಮ ಎಂದೇ ಗೌರವದಿಂದ ಕರೆಯಲಾಗುತ್ತಿರುವ ಹಿರಿಯ ನಟಿ ಕವಿಯೂರು ಪೊನ್ನಮ್ಮ (79) ಅಸೌಖ್ಯ ನಿಮಿತ್ತ ನಿನ್ನೆ ಸಂಜೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂ ದಿದರು. ಇವರು ಅರ್ಬುದ ರೋಗ ಚಿಕಿತ್ಸೆಯಲ್ಲಿದ್ದರು.
ಪತ್ತನಂತಿಟ್ಟ ಜಿಲ್ಲೆಯ ಕವಿಯೂ ರಿನಲ್ಲಿ 1945 ಸೆಪ್ಟಂಬರ್ 10ರಂದು ತೆಕ್ಕೆತ್ತೂರು ವೀಟಿಲ್ ಟಿ.ಪಿ. ದಾಮೋ ದರನ್-ಗೌರಿ ಅಮ್ಮ ದಂಪತಿಯ ಏಳು ಮಕ್ಕಳಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಪೊನ್ನಮ್ಮ ತಮ್ಮ ಐದನೇ ವಯಸ್ಸಿನಲ್ಲಿ ಗಾಯಕಿಯಾಗಿ ಬಳಿಕ ಕಲಾರಂಗಕ್ಕೆ ಪಾದಾರ್ಪಣೆಗೈದಿದ್ದರು. ಅಂದಿನಿಂದ ಅವರು ಕವಿಯೂರು ಪೊನ್ನಮ್ಮ ಎಂದೇ ಕರೆಯಲ್ಪಟ್ಟರು. ‘ಕೆಪಿಸಿಸಿಯ ಮೂಲಧನಂ’ ಎಂಬ ನಾಟಕದ ಮೂಲಕ ಅಭಿನಯ ರಂಗಪ್ರವೇ ಶಗೈದ ಇವರು ಅದರಲ್ಲಿ ಖ್ಯಾತಿ ಪಡೆದ ಬಳಿಕ 1962ರಲ್ಲಿ ಶ್ರೀರಾಮ ಪಟ್ಟಾಭಿಷೇಕಂ ಎಂಬ ಸಿನಿಮಾದ ಮೂಲಕ ಮಲೆಯಾಳಂ ಸಿನಿಮಾ ರಂಗಕ್ಕೆ ಪಾದಾರ್ಪಣೆದರು. 1964ರಲ್ಲಿ ‘ಕುಟುಂಬಿನಿ’ ಎಂಬ ಸಿನಿಮಾದಲ್ಲಿ ತಾಯಿಯಾಗಿ ಯೂ ಅಭಿನಯಿಸಿ ಗಮನಸೆಳೆದರು. ಧಾರಾವಾಹಿಯಲ್ಲಿಯೂ ಅವರು ಅಭಿನಯಿಸಿದ್ದಾರೆ. 400ರಷ್ಟು ಸಿನಿಮಾದಲ್ಲಿ ಅಭಿನಯಿಸಿದ ಇವರು ಅದರಲ್ಲಿ 100ರಷ್ಟು ಸಿನಿಮಾಗಳಲ್ಲಿ ತಾಯಿಯ ಪಾತ್ರ ನಿರ್ವಹಿಸಿದ್ದರು. ಮಲೆಯಾಳಂ ಸಿನಿಮಾ ರಂಗದ ದಿಗ್ಗದ ನಟರಾದ ಸತ್ಯನ್, ಪ್ರೇಮ್‌ನಸೀರ್, ಮಧು, ಮಮ್ಮುಟ್ಟಿ, ಮೋಹನ್‌ಲಾಲ್ ಮೊದಲಾದ ನಟರ ತಾಯಿ ಯಾಗಿಯೂ ಅವರು ಅಭಿನಯಿಸಿದ್ದರು. ಇದರಿಂದಾಗಿ ಮೋಹನ್‌ಲಾಲ್‌ರನ್ನು ತನ್ನ ಸ್ವಂತ ಪುತ್ರನಾಗಿಯೇ ಭಾವಿಸಿರುವುದಾಗಿ ಕವಿಯೂರು ಪೊನ್ನಮ್ಮ ಹಲವು ಬಾರಿ ಹೇಳಿದ್ದರು. 2021ರಲ್ಲಿ ಬಿಡುಗಡೆಯಾದ ಆಣ್-ಪೆಣ್ಣ್ ಚಿತ್ರ ಇವರು ಅಭಿನಯಿಸಿದ ಕೊನೆಯ ಚಿತ್ರವಾಗಿತ್ತು.
ಅತ್ಯುತ್ತಮ ಸಹನಟಿಯಾಗಿ ನಾಲ್ಕು ಬಾರಿ ರಾಜ್ಯ ಪುರಸ್ಕಾರಕ್ಕೆ ಅರ್ಹರಾಗಿದ್ದರು. ಕವಿಯೂರು ಪೊನ್ನಮ್ಮರ ನಿಧನಕ್ಕೆ ಇಡೀ ಮಲೆಯಾಳಂ ಚಿತ್ರರಂಗದ ಎಲ್ಲರೂ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಬಿಜೆಪಿ ಪ್ರಚಾರ ಕೇರಳದಲ್ಲಿ ಚುನಾವಣಾ ಪ್ರತಾರ ನಡೆಸಿದ್ದರು.
ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಕರುಮಾಲ್ಲೂರಿನ ತವರೂರಿನಲ್ಲಿ ನಡೆಯಲಿದೆ.