ಮಲ್ಲದ ಯುವಕನ ನಾಪತ್ತೆಯಲ್ಲಿ ನಿಗೂಢತೆ: ಪೊಲೀಸ್ ತನಿಖೆ ಆರಂಭ

ಮುಳ್ಳೇರಿಯ: ಬೋವಿಕ್ಕಾನ ಬಳಿಯ ಮಲ್ಲದ ವಿಕ್ಟರ್ ಡಿಸೋಜಾರ ಪುತ್ರ ಪ್ರವೀಣ್ ಪ್ರಕಾಶ್ ಡಿಸೋಜಾ (28) ಅವರ ನಾಪತ್ತೆಗೆ ಸಂಬಂಧಿಸಿ ಆದೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಂದೆ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಟೈಲ್ಸ್ ಕಾರ್ಮಿಕನಾದ ಪ್ರವೀಣ್ ಪ್ರಕಾಶ್ ಎಪ್ರಿಲ್ 28ರಿಂದ ನಾಪತ್ತೆಯಾಗಿದ್ದಾರೆ. ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋಗಿದ್ದರು. ಅನಂತರ ಅವರು ಮನೆಗೆ ಮರಳಿ ಬಂದಿಲ್ಲ. ಮಾತ್ರವಲ್ಲ ಫೋನ್ ಕರೆ  ಕೂಡಾ ಮಾಡಿಲ್ಲವೆಂದು ತಂದೆ ನೀಡಿದ ದೂರಿನಲ್ಲಿ  ತಿಳಿಸಲಾಗಿದೆ. ಸಾಮಾನ್ಯವಾಗಿ ಮನೆಯಿಂದ ಹೋದರೆ ಕೆಲವು ದಿನಗಳ ನಂತರವೇ ಮರಳಿ ಬರುತ್ತಿದ್ದರು. ಆ ಸಂದರ್ಭದಲ್ಲಿ ಮನೆಗೆ ಫೋನ್ ಕರೆ ಮಾಡುತ್ತಿದ್ದರು. ಈ ಬಾರಿ ಮನೆಯಿಂದ ಹೋದ ಬಳಿಕ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಅವರ ನಾಪತ್ತೆ  ನಿಗೂಢತೆಗೆ ಕಾರಣವಾಗಿದೆ. ಸೈಬರ್ ಸೆಲ್‌ನ ಸಹಾಯದೊಂದಿಗೆ ಪ್ರವೀಣ್ ಪ್ರಕಾಶ್ ಡಿಸೋಜಾರನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.

You cannot copy contents of this page