ಮಳೆಗೆ ಎರಡೆಡೆಗಳಲ್ಲಿ ಮನೆ ಕುಸಿತ: ಇಬ್ಬರಿಗೆ ಗಾಯ, ಮೂವರು ಅನಾಹುತದಿಂದ ಪಾರು
ಕಾಸರಗೋಡು: ನಿನ್ನೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಎರಡು ಮನೆಗಳು ಕುಸಿದುಬಿದ್ದು ಇಬ್ಬರು ಗಾಯಗೊಂ ಡು, ಮೂವರು ಸಂಭಾವ್ಯ ಅನಾಹುತದಿಂದ ಪಾರಾದ ಘಟನೆ ನಡೆದಿದೆ.
ಬಂದಡ್ಕ ಕಕ್ಕೆಚಾಲ್‌ನ ಮಾಧವಿ ಶಂಕರ್ ಎಂಬವರ ಮನೆ ನಿನ್ನೆ ಗಾಳಿ ಮಳೆಗೆ ಕುಸಿದು ಬಿದ್ದಿದೆ. ಆ ವೇಳೆ ಮನೆಯೊಳಗಿದ್ದ ಮಾಧವಿ ಮತ್ತು ಅವರ ಮೊಮ್ಮಗ ವಿಶಾಖ್ (9) ಎಂಬವರು ಗಾಯಗೊಂಡಿದ್ದಾರೆ. ಮನೆ ಮೇಲ್ಛಾವಣಿ ಕುಸಿದು ಬೀಳುವ ಸದ್ದು ಕೇಳಿದಾಗ ಇವರಿಬ್ಬರು ಹೊರಗೆ ಓಡಿ ಹೋಗುವಷ್ಟರಲ್ಲಿ ಮೇಲ್ಛಾವಣಿ ಅವರ ದೇಹದ ಮೇಲೆ ಬಿದ್ದಿದೆ. ಇದ ರಿಂದ ಇಬ್ಬರ ತಲೆಗೆ ಗಾಯಗೊಂ ಡಿದ್ದು, ಅವರನ್ನು ಹೊಸದುರ್ಗ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹೊಸದುರ್ಗ ಮಡಿಕೈಯ ಪುಷ್ಪ ಎಂಬವರ ಹೆಂಚು ಹಾಸಿದ ಮನೆ ನಿನ್ನೆ ಭಾರೀ ಮಳೆಗೆ ಕುಸಿದು ಬಿದ್ದಿದೆ. ಮನೆಯ ಮೇಲ್ಛಾವಣಿ ಕುಸಿದು ಬೀಳುವ ವೇಳೆ ಪುಷ್ಪಾರ ಪತಿ ದಿನೇಶ್ ಮತ್ತು ಮಗ ಮನೆಯೊಳ ಗಿದ್ದರು. ಅವರೆಲ್ಲರೂ ಮನೆಯಿಂದ ಹೊರಕ್ಕೆ ಓಡಿ ಸಂಭಾವ್ಯ ಅನಾಹುತ ದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.
ವಿಷಯ ತಿಳಿದ ಅಂಬಲತರ ಗ್ರಾಮ ಕಚೇರಿಯ ಸಿಬ್ಬಂದಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಮನೆಯ ಮೇಲ್ಛಾವಣಿ ಪೂರ್ಣವಾಗಿ ಕುಸಿದು ಬಿದ್ದಿರುವು ದರಿಂದಾಗಿ ಪುಷ್ಪ ಮತ್ತು ಅವರ ಮಗನನ್ನು ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟು ಅಲ್ಲಿ ಅವರಿಗೆ ಆಶ್ರಯ ನೀಡಲಾಗಿದೆ. ಪುಷ್ಪರ ಪತಿ ದಿನೇಶ್‌ರನ್ನು ಹೊಸದುರ್ಗ ನಲ್ಲಿರು ವೃದ್ಧ ಸದನಕ್ಕೆ ಸಾಗಿಸಲಾಗಿದೆ.