ಮಳೆ, ಗುಡುಗು: ವಿವಿಧೆಡೆ ನಾಶ, ಪರಪ್ಪದಲ್ಲಿ ಮನೆಗೆ ಸಿಡಿಲೆರಗಿ ಇಬ್ಬರಿಗೆ ಗಾಯ

ಕಾಸರಗೋಡು: ತುಲಾ ತಿಂಗಳಲ್ಲಿ  ಮಳೆ ತೀವ್ರಗೊಂಡಿರುವಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ನಾಶನಷ್ಟ ಉಂಟಾಗಿದೆ. ಗುಡುಗು ಮಿಂಚಿನೊಂದಿಗೆ ಸುರಿಯುವ ಮಳೆಯಿಂದ ನಾಶನಷ್ಟ ಉಂಟಾಗಿದ್ದು, ಮುಂದಿನ ಒಂದು ವಾರ ಇದೇ ರೀತಿ ಮಳೆ ಮುಂದುವರಿಯಬಹುದೆಂದು ಕೇಂದ್ರ ಹವಾಮಾನ ಇಲಾಖೆಯು ಸೂಚಿಸಿದೆ. ಮಿಂಚು, ಗಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮಲೆನಾಡು ವಲಯಗಳಲ್ಲಿ ಪ್ರಯಾಣಿಸುವವರು ಜಾಗ್ರತೆ ವಹಿಸಬೇಕೆಂದು ಸೂಚಿಸಲಾಗಿದೆ. ಬಂಗಾಳ ಆಳಸಮುದ್ರದಲ್ಲಿ ಗಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ನಾಳೆಯಿಂದ ಮುಂದಿನ ಎರಡು, ಮೂರು ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಲ್ಲಿ ಮಳೆ ಹಾಗೂ ಗುಡುಗು ಮಿಂಚು ಸಂಭವಿಸುವ ಸಾಧ್ಯತೆಯಿದೆ.

ತೃಕ್ಕರಿಪುರದಲ್ಲಿ ನಿನ್ನೆ ರಾತ್ರಿ ಉಂಟಾದ ಗುಡುಗು ಮಿಂಚಿನಲ್ಲಿ ಹಲವೆಡೆ ನಾಶನಷ್ಟ ಉಂಟಾಗಿದೆ. ಎಲೆಕ್ಟ್ರೋನಿಕ್ಸ್ ಉಪಕರಣಗಳು ಸಹಿತ ವಿದ್ಯುತ್ ಉಪಕರಣಗಳು ನಾಶಗೊಂಡಿದೆ. ಇದೇ ರೀತಿ ಪರಪ್ಪದಲ್ಲಿ ಸರೋಜಿನಿ ಎಂಬವರ ಮನೆಗೆ ಗುಡುಗು ತಗಲಿ ಆಂಶಿಕ ನಾಶವುಂಟಾಗಿದೆ. ನಿನ್ನೆ ರಾತ್ರಿ ಸರೋಜಿನಿ ಹಾಗೂ ಪುತ್ರ ರಾಜೇಂದ್ರನ್ ಮನೆಯೊಳಗಿದ್ದು, ಇವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಡೋಂಬೇಳೂರು ಪಂಚಾಯತ್‌ನಲ್ಲೂ, ಉದುಮ ಪಂಚಾಯತ್‌ನ ವಿವಿಧೆಡೆ ಮಳೆ ಗಡುಗಿನಿಂದ ಹಾನಿಯುಂಟಾಗಿದೆ.

You cannot copy contents of this page