ಮಳೆ: ಮುಂದುವರಿಯುತ್ತಿರುವ ನಾಶನಷ್ಟ ; ಕೊಡ್ಲಮೊಗರುನಲ್ಲಿ ಗುಡ್ಡೆ ಕುಸಿತ
ಕೊಡ್ಲಮೊಗರು: ವಿವಿಧ ಕಡೆಗ ಳಲ್ಲಿ ಗುಡ್ಡೆ ಕುಸಿತ, ಕೃಷಿ ನಾಶ ಸಂಭವಿಸುತ್ತಿರುವ ಮಧ್ಯೆ ಕೊಡ್ಲ ಮೊಗರು ಉರ್ಮಿ ತುಪ್ಪೆಯಲ್ಲಿ ನಿನ್ನೆ ರಾತ್ರಿ ಗುಡ್ಡೆ ಕುಸಿತ ಉಂಟಾಗಿದೆ. ಇದರಿಂದಾಗಿ ಇಲ್ಲಿನ ಜನಾರ್ದನ ಭಟ್, ಸಹೋದರಿ ಶಶಿಕಲಾ ಎಂಬಿವರ ಕೃಷಿ ನಾಶವಾಗಿದೆ. ಇವರ ತೋಟಕ್ಕೆ ಗುಡ್ಡೆ ಕುಸಿದು ಬಿದ್ದಿದೆ. ಕಂಗು, ತೆಂಗು ನಾಶವಾಗಿ ರುವುದಾಗಿ ಅವರು ತಿಳಿಸಿದ್ದಾರೆ. ಕೃಷಿ ತೋಟದ ಬದಿಯಲ್ಲಿರುವ ತೋಡು ಮಣ್ಣಿನಿಂದ ಮುಚ್ಚಿಹೋಗಿದ್ದು, ತೋಟಕ್ಕೆ ನೀರು ಹರಿದು ಬರುತ್ತಿದೆ.
ಪೆರ್ಲ: ಇಲ್ಲಿನ ಅಡ್ಕಸ್ಥಳ ಸಮೀಪದ ಪೈಸಾರಿ ಎಂಬಲ್ಲಿ ಧರೆ ಕುಸಿದು ಮನೆಯ ಬದಿ ಹಾನಿಯಾ ಗಿದೆ. ಎಣ್ಮಕಜೆ ಪಂಚಾಯತ್‌ನ ೧೭ನೇ ವಾರ್ಡ್‌ನಲ್ಲಿರುವ ಐತ್ತಪ್ಪ ನಾಯ್ಕರ ಮನೆಯ ಬದಿಗೆ ಗುಡ್ಡೆ ಕುಸಿದು ಬಿದ್ದಿದೆ. ಎಣ್ಮಕಜೆ ಪಂಚಾಯತ್‌ನ 13ನೇ ವಾರ್ಡ್ ಮಲಂಗರೆ ಎಂಬಲ್ಲಿ ಬಾವಿಯೊಂ ದು ಕುಸಿದಿದೆ. ಇಲ್ಲಿನ ಅಬ್ದುಲ್ ಅಸೀಸ್‌ರ ಬಾವಿ ಈ ರೀತಿ ಕುಸಿದಿರುವುದು.