ಮಸಾಜ್ ಕೇಂದ್ರದ ಮರೆಯಲ್ಲಿ ವೇಶ್ಯಾಟಿಕೆ : ನಾಲ್ವರು ಮಹಿಳೆಯರ ಸಹಿತ ಎಂಟು ಮಂದಿ ಸೆರೆ
ಕಲ್ಲಿಕೋಟೆ: ಪೇರಾಂಬ್ರದಲ್ಲಿ ಆಯುರ್ವೇದ ಮಸಾಜ್ ಸೆಂಟರ್‌ನ ಮರೆಯಲ್ಲಿ ವೇಶ್ಯಾಟಿಕೆ ದಂಧೆ ನಡೆಸಿದ ನಾಲ್ವರು ಮಹಿಳೆಯರ ಸಹಿತ 8 ಮಂದಿಯನ್ನು ಬಂಧಿಸ ಲಾಗಿದೆ. ಪೇರಾಂಬ್ರ ಬಿವರೇಜಸ್ ಸಮೀಪ ಕಾರ್ಯಾಚರಿಸುವ ಆಯುಷ್ ಸ್ಪಾ ಎಂಬ ಮಸಾಜ್ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಇತರ ರಾಜ್ಯಗಳಿಂದಲೂ ಮಹಿಳೆಯರನ್ನು ಇಲ್ಲಿಗೆ ತಲುಪಿಸಿ ವೇಶ್ಯಾಟಿಕೆ ದಂಧೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಮಸಾಜ್‌ನ ಹೆಸರಲ್ಲಿ ಕಾನೂನು ವಿರುದ್ಧ ಚಟುವಟಿಕೆಗಳು ಮುಂದುವರಿದ ಹಿನ್ನೆಲೆಯಲ್ಲಿ ಪೊಲೀ ಸರು ದಾಳಿ ನಡೆಸಿದ್ದಾರೆ. ಪೊಲೀಸರು ಮಸಾಜ್ ಕೇಂದ್ರದ ಮೆನೇಜರ್ ಚೆಂಬನೋಡ್ ನಿವಾಸಿ ಆಂಟೋ ಸಹಿತ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇವರನ್ನು ಕಸ್ಟಡಿಗೆ ತೆಗೆದು ಕರೆದೊಯ್ಯುತ್ತಿದ್ದ ವೇಳೆ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಒಂದು ವರ್ಷದಿಂದ ಈ ಸಂಸ್ಥೆ ಇಲ್ಲಿ ಕಾರ್ಯಾಚರಿಸುತ್ತಿದೆ.
ಕಾನೂನು ವಿರುದ್ಧ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲವೆಂದು ಆರೋಪಿಸಿ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಕಲ್ಲಿಕೋಟೆ ಮಲಾ ಪರಂಬ್‌ನಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆಗೆ ತೆಗೆದು ವೇಶ್ಯಾಟಿಕೆ ದಂಧೆ ನಡೆಸಿದ ಪ್ರಕರಣದಲ್ಲಿ 10ಕ್ಕಿಂತ ಹೆ ಚ್ಚು ಮಂದಿಯನ್ನು ಬಂಧಿಸಲಾಗಿತ್ತು.