ಮಸೀದಿಯಿಂದ ಹಣ ಕಳವು: ಊರವರ ಸಹಾಯದಿಂದ ಓರ್ವ ಆರೋಪಿ ಸೆರೆ; ಇನ್ನೋರ್ವ ಪರಾರಿ

ಕಾಸರಗೋಡು: ಮಸೀದಿಗೆ ಕಳ್ಳರು ನುಗ್ಗಿ  ಇಮಾಮ್‌ರ ಕೊಠಡಿಯಿಂದ 30,000 ರೂ. ನಗದು ಕಳವುಗೈದ ಘಟನೆ ನಡೆದಿದೆ. ಪೆರುಂಬಳ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಈ ಕಳವು ನಡೆದಿದೆ. ಮಸೀದಿಯ  ಇಮಾಮ್‌ರ ಕೊಠಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಲ್ಲಿಂದ ನಗದು ಅಪಹರಿಸಿದ್ದಾರೆ. ಈ ಬಗ್ಗೆ ಮಸೀದಿಯ ಇಮಾಮ್ ಹಾಗೂ ಉಸ್ತಾದ್ ಆಗಿರುವ ಮಲಪ್ಪುರಂ ಚೇಲಾಂಬ್ರ ನಿವಾಸಿ ಸ್ವಾಲೀಹ್ ಚೆರಿಯೋಡತ್ತಿಲ್ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

  ನಿನ್ನೆ ಮುಂಜಾನೆ ಈ ಕಳವು ನಡೆದ ಬಳಿಕ ಇಬ್ಬರು ಮಸೀದಿ ಪರಿಸರದಲ್ಲಿ ಹೋಗುತ್ತಿರುವುದನ್ನು ಗಮನಿಸಿದ ಇಮಾಮ್ ಆ ಬಗ್ಗೆ ನೀಡಿದ ಮಾಹಿತಿಯಂತೆ ಊರವರು ಸೇರಿ ಇಬ್ಬರನ್ನು ಹಿಡಿಯಲೆತ್ನಿಸಿದಾಗ ಅದರಲ್ಲಿ ಓರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಇನ್ನೋರ್ವನನ್ನು ಊರವರು ಸೆರೆಹಿಡಿದು ಮೇಲ್ಪರಂಬ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವಶಕ್ಕೊಳಗಾದಾತ ಪ್ರಾಯ ಪೂರ್ತಿಯಾಗದ ಬಾಲಕನಾಗಿದ್ದಾನೆ. ಕಳ್ಳರು ಬಂದ ವಾಹನ ಮಸೀದಿ ಪರಿಸರದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೆರೆಗೊಳಗಾದವರನ್ನು ಜುವೈನಲ್ ಬೋರ್ಡ್‌ನ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ.

 ಮಸೀದಿಗಳಲ್ಲಿ ಇತ್ತೀಚೆಗೆ ವ್ಯಾಪಕ ಕಳವು ನಡೆಯುತ್ತಿದೆ. ದಿನಗಳ ಹಿಂದೆ ಕಳವು ನಡೆಸುವ ಉದ್ದೇ ಶದಿಂದ ತಂಡವನ್ನು ಮೇಲ್ಪರಂಬ ಪರಿಸರದಿಂದ ಕಳ್ಳನನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಕಳ್ಳರ ತಂಡ ವಾಹನಗಳಿಂದ ಪೆಟ್ರೋಲ್  ತೆಗೆಯಲೆಂದು ಬಂದಿದ್ದರು.  ಅವರು ಬಂದ ವಾಹನ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *

You cannot copy content of this page