ಮಸೀದಿ ನಿರ್ಮಾಣ ಕಾಮಗಾರಿ ವೇಳೆ ಬಿದ್ದು ಕಾರ್ಮಿಕ ಮೃತ್ಯು
ಕುಂಬಳೆ: ಮಸೀದಿಯ ನಿರ್ಮಾಣ ಕಾಮಗಾರಿ ವೇಳೆ ಬಿದ್ದು ಅನ್ಯರಾಜ್ಯ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಉತ್ತರಪ್ರದೇಶದ ಮಾನ್ಪುರ್ ಗುಂಕೆಫ್ರಿ ನಿವಾಸಿ ಕವಿಲಾಲ್ ಎಂಬವರ ಪುತ್ರ ರಾಮ್‌ದಾಸ್ (55) ಮೃತಪಟ್ಟ ದುರ್ದೈವಿಯಾಗಿ ದ್ದಾರೆ. ಮೊಗ್ರಾಲ್ ಕೊಪ್ಪರ ಬಜಾರ್‌ನಲ್ಲಿ ಹೊಸತಾಗಿ ನಿರ್ಮಿಸುವ ಮಸೀದಿಯ ಕೆಲಸದಲ್ಲಿ ಇವರು ಪಾಲ್ಗೊಂಡಿದ್ದರು. ನಿನ್ನೆ ಬೆಳಿಗ್ಗೆ 11 ಗಂಟೆ ವೇಳೆ ಮಸೀದಿಯ ಕಾಂಕ್ರೀಟ್ ಮೆಟ್ಟಿಲಿಗೆ ಅಳವಡಿಸಿದ ಹಲಗೆ ತೆಗೆಯುತ್ತಿದ್ದ ವೇಳೆ ರಾಮ್‌ದಾಸ್ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ನಿಧನ ಸಂಭವಿಸಿದೆ. ಕಳೆದ 12 ವರ್ಷಗಳಿಂದ ಕಾಸರಗೋಡು ಭಾಗದಲ್ಲಿ ವಾಸಿಸುತ್ತಿರುವ ರಾಮ್‌ದಾಸ್ ನಿರ್ಮಾಣ ಕಾರ್ಮಿಕ ನಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರ ಓರ್ವ ಪುತ್ರ ದೀಪಕ್ ಕೂಡಾ ಇವರ ಜತೆಗೆ ಇಲ್ಲಿದ್ದು ಕೆಲಸ ನಿರ್ವಹಿಸು ತ್ತಿದ್ದಾರೆ. ಮೃತರು ಪತ್ನಿ ಹೇಮಂತಿ, ಇತರ ಮಕ್ಕಳಾದ ನೀಲಂ, ನಿಹ, ನಿಸ, ಸಹೋದರ ರಾಮ್ ಪ್ರಸಾದ್, ನಾಲ್ವರು ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.