ಮಸ್ಟರಿಂಗ್ ನಡೆಸದ 5 ಲಕ್ಷ ಮಂದಿಗೆ ಮುಂದಿನ ತಿಂಗಳಿಂದ ರೇಶನ್ ಮೊಟಕು ಸಾಧ್ಯತೆ

ತಿರುವಂನಂತಪುರ: ಇನ್ನೂ ಮಸ್ಟರಿಂಗ್ ನಡೆಸದ ಹಳದಿ ಮತ್ತು ಪಿಂಕ್ ಕಾರ್ಡ್‌ದಾರರ ಸದಸ್ಯರಿಗೆ ಮುಂ ದಿನ ತಿಂಗಳಿಂದ ರೇಶನ್ ಸಾಮಗ್ರಿಗಳ ವಿತರಣೆ ಮೊಟಕುಗೊಳ್ಳುವ ಸಾಧ್ಯತೆ ಯಿದೆ. ಈ ಎರಡು ವಿಭಾಗಗಳಿಗೆ ಸೇರಿದ ರೇಶನ್ ಕಾರ್ಡ್‌ಗಳ ಪೈಕಿ ಐದು ಲಕ್ಷದಷ್ಟು ಮಂದಿ ಸದಸ್ಯರು ಇನ್ನೂ ಮಸ್ಟರಿಂಗ್ ನಡೆಸಿಲ್ಲ. ಆದರೆ ಇಂತಹ ಕಾರ್ಡ್‌ನಲ್ಲಿ ಸದಸ್ಯರಾಗಿರುವವರ ಪೈಕಿ ಯಾರಾದರೂ ಒಬ್ಬ ಸದಸ್ಯ ಮಸ್ಟರಿಂಗ್ ನಡೆಸಿದಲ್ಲಿ ಅಂತವರಿಗೆ ರೇಶನ್ ಸಾಮಗ್ರಿ ಲಭಿಸಲಿದೆ. ಅಂತಹ ಕಾರ್ಡ್‌ಗಳು ರದ್ದಾಗದು. ಇನ್ನೂ ಮಸ್ಟ ರಿಂಗ್ ನಡೆಸದೇ ಇರುವವರನ್ನು ತಾತ್ಕಾಲಿಕವಾಗಿ ಅದರಿಂದ ಹೊರತು ಪಡಿಸಿ ಅವರಿಗೆ ನೋನ್ ಕೇರಳ ರೆಸಿಡೆನ್ಸ್ (ಎನ್‌ಆರ್‌ಕೆ) ಸ್ಟಾಟಸ್ಟ್ ನೀಡಲಾಗುವುದು. ಮಾತ್ರವಲ್ಲ ಅಂತ ರಿಗೆ ಮಸ್ಟರಿಂಗ್ ನಡೆಸಲು ಮತ್ತೆ ಮೂರು ತಿಂಗಳ ಅವಕಾಶ ನೀಡಲಾಗುವುದು. ಕೇಂದ್ರ ಸರಕಾರ  ನೀಡಿದ ನಿರ್ದೇಶದ ಪ್ರಕಾರ ಈ ತಿಂಗಳ ೩೦ರೊಳಗಾಗಿ ಎಲ್ಲರೂ ಮಸ್ಟರಿಂಗ್ ನಡೆಸಬೇಕಾಗಿದೆ.  ನಡೆಸದಿರುವವರಿಗೆ ಮುಂದಿನ ತಿಂಗಳಿಂದ ರೇಶನ್ ಸಾಮಗ್ರಿಗಳು ಲಭಿಸದು. ಈ ತನಕ ಮಸ್ಟರಿಂಗ್ ನಡೆಸದೇ ಇರುವವರಿಗೆ ಆ ಬಗ್ಗೆ ವಿಶೇಷ ಮಾಹಿತಿ ನೀಡುವುದಾಗಿ ರಾಜ್ಯ ನಾಗರಿಕ ಪೂರೈಕೆ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಹಳದಿ ಮತ್ತು ಪಿಂಕ್ ಕಾರ್ಡ್ ವಿಭಾಗದಲ್ಲಿ  ಒಟ್ಟು 1,44,90,188 ಮಂದಿ ಒಳಗೊಂ ಡಿದ್ದು, ಅದರಲ್ಲಿ ಶೇ. 96.48 ಮಂದಿ ಮಾತ್ರವೇ ಮಸ್ಟರಿಂಗ್ ನಡೆಸಿದ್ದಾರೆ.

RELATED NEWS

You cannot copy contents of this page