ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಫಡ್ನವಿಸ್ ಇಂದು ಸಂಜೆ ಪ್ರಮಾಣವಚನ ಸ್ವೀಕಾರ
ಮುಂಬೈ: ತೀವ್ರ ಹಗ್ಗಜಗ್ಗಾಟದ ಮಧ್ಯೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನೇತಾರ ಹಾಗೂ ಮಾಜಿ ಮುಖ್ಯಮಂತ್ರಿಯೂ ಆದ ದೇವೇಂದ್ರ ಫಡ್ನವಿಸ್ ಆಯ್ಕೆ ಗೊಂಡಿದ್ದು, ಇಂದು ಸಂಜೆ 5 ಗಂಟೆಗೆ ಮುಂಬೈಯ ಆಜಾದ್ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಹೊಸ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸು ವರು. ಇವರ ಜೊತೆಗೆ ಉಪಮುಖ್ಯ ಮಂತ್ರಿಯಾಗಿ ಎನ್ಸಿಪಿ ನಾಯಕ ಅಜಿತ್ ಪವಾರ್ ಹಾಗೂ ಶಿವಸೇನೆ ನೇತಾರ ಮಾಜಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡಾ ಪ್ರಮಾಣ ವಚನ ಸ್ವೀಕರಿಸುವರು. ಸಚಿವರುಗಳ ಪ್ರಮಾಣವಚನ ಸ್ವೀಕಾರ ಮುಂದೆ ನಡೆಯಲಿದೆ. ಪ್ರಮಾಣವಚನ ಸ್ವೀಕಾರದಂಗವಾಗಿ ಆಜಾದ್ ಮೈದಾನ ಹಾಗೂ ಪರಿಸರ ಪ್ರದೇಶಗಳಲ್ಲಿ ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
288 ಸದಸ್ಯರ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 230 ಸ್ಥಾನಗಳಲ್ಲಿ ಪ್ರಚಂಡ ಗೆಲುವು ಸಾಧಿಸಿದೆ. ಇದರಲ್ಲಿ ಬಿಜೆಪಿ 132 ಸ್ಥಾನ ಗೆದ್ದರೆ, ಏಕನಾಥ್ ಶಿಂಧೆಯವರ ಶಿವಸೇನೆ 57 ಮತ್ತು ಅಜಿತ್ ಪವಾರ್ರ ಎನ್ಸಿಪಿ 41 ಸ್ಥಾನ ಗೆದ್ದಿದೆ. ಬಿಜೆಪಿಗೆ ಐವರು ಪಕ್ಷೇತರರು ಬೆಂಬಲ ಘೋಷಿಸಿದ್ದಾರೆ.
ಮತ್ತೊಂದೆಡೆ ಮಹಾವಿಕಾಸ್ ಆಘಾಡಿ ಪ್ರದರ್ಶನವು ಚುನಾವ ಣೆಯಲ್ಲಿ ನಿರಾಶಾದಾಯಕವಾಗಿತ್ತು. ಕಾಂಗ್ರೆಸ್ ಕೇವಲ 16 ಸ್ಥಾನಗಳಲ್ಲಿ ಗೆದ್ದರೆ ಶರದ್ಪವಾರ್ರ ಎನ್ಸಿಪಿ-ಎಸ್ಪಿ 10 ಮತ್ತು ಉದ್ಧವ್ ಠಾಕ್ರೆಯವರ ಶಿವಸೇನೆ 20 ಸ್ಥಾನ ಪಡೆದಿದೆ.