ಮಹಾರಾಷ್ಟ್ರ ಚುನಾವಣೆಯಲ್ಲಿ ಎಂ.ಎಲ್. ಅಶ್ವಿನಿಯವರಿಗೆ ಹೊಣೆ
ಕಾಸರಗೋಡು: ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರೀ ಸಮಿತಿ ಸದಸ್ಯೆ ಮಂಜೇಶ್ವರ ಬ್ಲೋಕ್ ಪಂ. ಸದಸ್ಯೆ ಎಂ.ಎಲ್. ಅಶ್ವಿನಿಯವರಿಗೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಸಹ ಇನ್‌ಚಾರ್ಜ್ ಹೊಣೆ ನೀಡಲಾಗಿದೆ. ಈ ಮೊದಲು ಇವರು ತೆಲಂಗಾನ, ಕರ್ನಾಟಕ, ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಮಂಡಲಗಳ ಹೊಣೆಯನ್ನು ವಹಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು.