ಮಹಿಳೆಯರೊಂದಿಗೆ ಅನುಚಿತ ವರ್ತನೆ: ಆಸ್ಪತ್ರೆಯ ವಾಚ್‌ಮೆನ್ ಸೆರೆ
ಉಪ್ಪಳ: ರಾತ್ರಿ ಹೊತ್ತಿನಲ್ಲಿ ಟಾಯ್ಲೆಟ್‌ಗೆ ಹೋಗುವ ಮಹಿಳೆಯ ರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಂತೆ ಖಾಸಗಿ ಆಸ್ಪತ್ರೆಯ ವಾಚ್‌ಮೆನ್‌ನ್ನು ರೋಗಿಗಳು ಹಾಗೂ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಉಪ್ಪಳದ ಖಾಸಗಿ ಆಸ್ಪತ್ರೆಯೊಂ ದರ ವಾಚ್‌ಮೆನ್ ಆಗಿರುವ ಬೇ ಕೂರು ಅಗರ್ತಿಮೂಲೆಯ ರಾಜೇಶ್ (45) ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಇದೇ ವೇಳೆ ಯಾರೂ ಲಿಖಿತವಾಗಿ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಈತನ ಮೇಲೆ ಸ್ವತಃ ಕೇಸು ದಾಖಲಿಸಿದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿ ಸಿದ್ದಾರೆ. ನಿನ್ನೆ ರಾತ್ರಿ 9.30ರ ವೇಳೆ ಈತ ಮಹಿಳೆಯ ರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಹೇಳಲಾಗುತ್ತಿದೆ. ವಿಷಯ ತಿಳಿದು ನಾಗರಿಕರು ತಲುಪಿ ಸೆರೆಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರೋಪಿ ಈ ಹಿಂದೆ ಉಪ್ಪಳದಲ್ಲಿ ಬೇರೊಂದು ಆಸ್ಪತ್ರೆಯಲ್ಲಿ ವಾಚ್‌ಮೆನ್ ಆಗಿದ್ದನೆಂದು ಹೇಳಲಾಗುತ್ತಿದೆ.