ಮಹಿಳೆಯರ ಸಹಾಯದಿಂದ ಕಾರಿನಲ್ಲಿ ಎಂಡಿಎಂಎ ಸಾಗಾಟ: ಇನ್ನೋರ್ವ ಸೆರೆ

ಕಾಸರಗೋಡು: ಮಹಿಳೆ ಯರನ್ನು ಬಳಸಿ ಕಾರಿನಲ್ಲಿ ಮಾದಕ ವಸ್ತು ಸಾಗಾಟ ನಡೆಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಕೊಡಗು ವಿರಾಜ ಪೇಟೆ ಹಾಲುಗುಂಡಿ ಎಂಬಲ್ಲಿನ ಎ.ಕೆ. ಆಬಿದ್ ಎಂಬಾತನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ತಂಡಕ್ಕೆ ಎಂಡಿಎAಎ ಹಸ್ತಾಂತರಿಸಿರುವುದು ಈತನಾಗಿದ್ದಾನೆನ್ನಲಾಗಿದೆ.
ಫೆಬ್ರವರಿ 25ರಂದು ರಾತ್ರಿ ಆದೂರು ಎಸ್ಐ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ತಂಡ ಪಟ್ರೋಲಿಂಗ್ ನಡೆಸುತ್ತಿದ್ದಾಗ ಕೊಟ್ಯಾಡಿ ಭಾಗದಿಂದ ಅಪರಿಮಿತ ವೇಗದಲ್ಲಿ ಬಂದ ಕಾರನ್ನು ನಿಲ್ಲಿಸು ವಂತೆ ಪೊಲೀಸರು ಸೂಚಿಸಿದ್ದರು. ಅದನ್ನು ಲೆಕ್ಕಿಸದೆ ಕಾರು ವಿವಿಧ ರಸ್ತೆಗಳಲ್ಲಿ ಪರಾರಿಯಾಗಲೆತ್ನಿಸಿದೆ. ಕೂಡಲೇ ಪೊಲೀಸರು ಕಾರನ್ನು ಬೆನ್ನಟ್ಟಿ ಬೆಳ್ಳಿಪ್ಪಾಡಿ ರಸ್ತೆ ಜಂಕ್ಷನ್ನಲ್ಲಿ ಪೊಲೀಸ್ ವಾಹನವನ್ನು ಅಡ್ಡ ನಿಲ್ಲಿಸಿ ತಡೆದು ನಿಲ್ಲಿಸಲಾಯಿತು. ಬಳಿಕ ನಡೆದ ತಪಾಸಣೆಯಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ತುಂಬಿಸಿ ಪ್ಯಾಂಟ್ನ ಜೇಬಿನಲ್ಲಿ ಬಚ್ಚಿಟ್ಟಿದ್ದ 100.76 ಗ್ರಾಂ ಎಂಡಿಎAಎ ಪತ್ತೆಹಚ್ಚ ಲಾಗಿತ್ತು. ಕಾರಿನಲ್ಲಿ ಮುಳಿ ಯಾರು ಮಾಸ್ತಿಕುಂಡ್ನ ಮುಹಮ್ಮದ್ ಸಹದ್ (26), ಕಾಸರಗೋಡು ಕೋಟೆಕಣಿಯ ಲ್ಲಿರುವ ಮಸೀದಿ ಕ್ವಾರ್ಟರ್ಸ್ನಲ್ಲಿ ವಾಸಿಸುವ ಪಿ.ಎಂ. ಶಾನವಾಸ್ (42), ಪತ್ನಿ ಶರೀಫ (40), ಚಟ್ಟಂಚಾಲ್ ಎಫ್.ಎಂ. ಮಂಜಿಲ್ನ ಶುಹೈಬ್ (28) ಎಂಬಿವರನ್ನು ಬಂಧಿಸಲಾಗಿತ್ತು. ಈ ವೇಳೆ ಒಂದು ಮಗು ಕೂಡಾ ಕಾರಿನಲ್ಲಿತ್ತು. ಕಾರಿನಲ್ಲಿ ಪತ್ತೆಯಾದ ಮೊಬೈಲ್ ಫೋನ್ ಪರಿಶೀಲಿಸಿದಾಗ ತಂಡಕ್ಕೆ ಮಾದಕವಸ್ತು ಹಸ್ತಾಂತರಿ ಸುವುದು ಆಬಿದ್ ಆಗಿದ್ದಾನೆಂದು ತಿಳಿದುಬಂದಿತ್ತು.

You cannot copy contents of this page