ಮಹಿಳೆ ಕುಸಿದು ಬಿದ್ದು ಮೃತ್ಯು
ಮುಳ್ಳೇರಿಯ: ಮಹಿಳೆ ಯೊಬ್ಬರು ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಬೆಳ್ಳೂರು ಬಳಿಯ ಕಾಯಿ ಮಲೆ ನಿವಾಸಿ ಬಾಬು ಎಂಬವರ ಪತ್ನಿ ಉಷಾ (೪೫) ಮೃತಪಟ್ಟವ ರಾಗಿದ್ದಾರೆ. ಇವರು ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮುಳ್ಳೇರಿ ಯಾದ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಸಂಭವಿಸಿತ್ತೆನ್ನ ಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ದಿವಂಗತರಾದ ಕುಟ್ಟಿ- ಭಾಗಿ ದಂಪತಿಯ ಪುತ್ರಿಯಾದ ಮೃತರು ಪತಿ, ಮಕ್ಕಳಾದ ದೀಪ್ತಿ, ತೃಪ್ತಿ, ಅಳಿಯ ಲೋಕೇಶ್, ಸಹೋದರ- ಸಹೋದರಿಯರಾದ ಆಶಾಲತ, ದೇವಕಿ, ಶಂಕರ, ಹರೀಶ, ಸುಕುಮಾರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.