ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಅಗಲುವಿಕೆಗೆ ಒಂದು ವರ್ಷ: ಎಲ್ಲೆಡೆ ಸಂಸ್ಮರಣಾ ಕಾರ್ಯಕ್ರಮ
ಕಾಸರಗೋಡು: ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಉಮ್ಮನ್ ಚಾಂಡಿ ಯವರ ಅಗಲುವಿಕೆಗೆ ಒಂದು ವರ್ಷ ವಾಗುತ್ತಿದೆ. ಇದರ ಅಂಗವಾಗಿ ಉಮ್ಮನ್ ಚಾಂಡಿಯವರ ಹುಟ್ಟೂ ರಾದ ಕೋಟ್ಟಯಂ ಜಿಲ್ಲೆಯ ಪುದು ಪಳ್ಳಿಯಲ್ಲಿ ಇಂದು ಬೆಳಿಗ್ಗೆ ಸಂಸ್ಮರಣಾ ಕಾರ್ಯಕ್ರಮ ನಡೆಸಲಾಯಿತು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಮಾತ್ರವಲ್ಲ ಪುದುಪಳ್ಳಿ ಸೈಂಟ್ ಜೋರ್ಜ್ ಅರ್ಥೋಡಕ್ಸ್ ಇಗರ್ಜಿ ಯಲ್ಲಿ ಇಂದು ಬೆಳಿಗ್ಗೆ ವಿಶೇಷ ಪ್ರಾರ್ಥನೆ ನಡೆಸಲಾ ಯಿತು. ಕಾಂಗ್ರೆಸ್‌ನ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೊಸದುರ್ಗ ಟೌನ್ ಹಾಲ್‌ನಲ್ಲಿ ಇಂದು ಬೆಳಿಗ್ಗೆ ಸಂಸ್ಮರಣಾ ಕಾರ್ಯಕ್ರಮ ಆರಂಭಗೊಂಡಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಕಾದಂಬರಿಗಾರ ಪಿ. ಸುರೇಂದ್ರನ್ ಸಂಸ್ಮರಣಾ ಭಾಷಣ ಮಾಡಿದರು. ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಹಲವು ನೇತಾರರು ಮಾತನಾಡಿದರು. ಉಮ್ಮನ್ ಚಾಂಡಿ ಸಂಸ್ಮರಣೆಯ ಅಂಗವಾಗಿ ಅಗೋಸ್ತ್ ೨೬ರ ತನಕ ವಿವಿಧ ಕಾರ್ಯ ಕ್ರಮಗಳನ್ನು ಕಾಂಗ್ರೆಸ್ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಇದರಂತೆ ವಸತಿ ರಹಿತರಾದ ಬಡವರಿಗೆ ಮನೆ ನಿರ್ಮಿಸಿ ಕೊಡುವ ತೀರ್ಮಾನ ಕೈಗೊಳ್ಳಲಾಗಿದೆ.