ಮಾಟೆಂಗುಳಿಯಲ್ಲಿ ಮಾದಕವಸ್ತು ವಶ: ಸೆರೆಗೀಡಾದ ಆರೋಪಿಗಳು ಕ್ರಿಮಿನಲ್ ಪ್ರಕರಣಗಳಲ್ಲೂ ಭಾಗಿ
ಕುಂಬಳೆ: ಕುಂಬಳೆ ಬಳಿಯ ಮಾಟೆಂಗುಳಿಯಲ್ಲಿ ಎಂಡಿಎಂಎ ಸಹಿತ ಸೆರೆಗೀಡಾದ ಆರೋಪಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾದವರಾಗಿದ್ದಾ ರೆಂದು ಪೊಲೀಸರು ತಿಳಿಸಿದ್ದಾರೆ.
ಕುಂಟಂಗೇರಡ್ಕದಲ್ಲಿ ವಾಸಿಸುವ ಪಾಲಕ್ಕಾಡ್ ನಿವಾಸಿ ಮನೋಹರನ್ (35), ಶಾಂತಿಪಳ್ಳದಲ್ಲಿ ವಾಸಿಸುವ ತಮಿಳುನಾಡು ದಿಂಡಿಗಲ್ ನಿವಾಸಿ ಸೆಲ್ವರಾಜ್ (24), ಕೊಯಿಪ್ಪಾಡಿ ಕಡಪ್ಪುರದ ಸಾದಿಕ್ (33) ಎಂಬಿವರನ್ನು ಮೊನ್ನೆ ಸಂಜೆ ಕುಂಬಳೆ ಇನ್‌ಸ್ಪೆಕ್ಟರ್ ಪಿ.ಕೆ. ವಿನೋದ್ ಕುಮಾರ್, ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಸೆರೆಹಿಡಿದರು. ಆರೋಪಿಗಳ ಕೈಯಿಂದ 2.220 ಗ್ರಾಂ ಎಂಡಿಎಂಎ ಮಾದಕವಸ್ತು ವಶಪಡಿಸಲಾಗಿತ್ತು. ಮೊನ್ನೆ ಸಂಜೆ ಪೊಲೀಸರು ಪಟ್ರೋಲಿಂಗ್ ನಡೆಸುತ್ತಿದ್ದಾಗ ಮಾಟೆಂಗುಳಿಯಲ್ಲಿ ಪಿಕ್‌ಅಪ್ ವಾಹನವೊಂದು ಸಂಶಯಾ ಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಅದರ ಲ್ಲಿದ್ದ ಮೂವರನ್ನು ಪೊಲೀಸರು ವಿಚಾರಿ ಸಿದಾಗ ತದ್ವಿರುದ್ಧ ಹೇಳಿಕೆಗಳನ್ನು ನೀಡಿ ದ್ದರು. ಇದರಿಂದ ಅವರನ್ನು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ.
ಆರೋಪಿಗಳ ಪೈಕಿ ಸೆಲ್ವರಾಜ್ ಫೋಕ್ಸೋ ಪ್ರಕರಣದ ಆರೋಪಿಯಾ ಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಸಾದಿಕ್ ವಿರುದ್ಧ ಕಾಪಾ ಹೇರಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ಎನ್‌ಡಿಪಿಎಸ್ ಸ್ಪೆಷಲ್ ಡ್ರೈವ್‌ನ ಅಂಗವಾಗಿ ಪೊಲೀಸರು ತಪಾಸಣೆ ನಡೆಸಿದ ವೇಳೆ ಆರೋಪಿಗಳು ಮಾದಕವಸ್ತು ಸಹಿತ ಸೆರೆಗೀಡಾಗಿದ್ದಾರೆ.