ಮಾದಕದ್ರವ್ಯ ಕೈವಶ: ಇಬ್ಬರ ಸೆರೆ
ಬದಿಯಡ್ಕ: ಮಾದಕದ್ರವ್ಯವಾದ 2.245 ಗ್ರಾಂ ಮೆಥಾಫಿಟಾಮಿನ್ ಕೈವಶವಿರಿಸಿಕೊಂಡ ಆರೋಪದಂತೆ ಇಬ್ಬರನ್ನು ಅಬಕಾರಿ ತಂಡ ಸೆರೆಹಿಡಿದು ಪ್ರಕರಣ ದಾಖಲಿಸಿಕೊಂಡಿದೆ.
ಉಬ್ರಂಗಳ ಚಕ್ಕೂಟಲ್ ವೀಟಿಲ್ ಮೊಹಮ್ಮದ್ ಸಾದಿಕ್ ಸಿ.ಬಿ ಮತ್ತು ನೆಕ್ರಾಜೆ ಚೆನ್ನಡ್ಕ ನಿವಾಸಿ ನೌಶಾದ್ ಎ.ಕೆ ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರ. ಬದಿಯಡ್ಕ ಎಕ್ಸೈಸ್ ಇನ್‌ಸ್ಪೆಕ್ಟರ್ ಜಿ.ಎ. ಜಿಷ್ಣು ಪಿ.ಆರ್ ನೇತೃತ್ವದ ಅಬಕಾರಿ ಕೋಂಬಿಂಗ್ ಆಪರೇಶನ್‌ನ ಅಂಗವಾಗಿ ಉಬ್ರಂಗಳ ಚಕ್ಕೂಟದಲ್ಲಿ ನಡೆಸಿದ ಪರಿಶೀಲನೆಯಲ್ಲಿ ಈ ಇಬ್ಬರನ್ನು ಸೆರೆಹಿಡಿದಿದೆ. ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್‌ಗಳಾದ ಅಬ್ದುಲ್ಲ ಕುಂಞಿ, ಬಿಜೋಯ್ ಇ.ಕೆ (ಗ್ರೇಡ್), ಪ್ರಿವೆಂಟೀವ್ ಆಫೀಸರ್ ಬಾಬು ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಲಿಜು ಜಿ.ಎನ್, ಸದಾನಂದನ್ ಪಿ ಮತ್ತು ಶಂಶಾ ಎಂಬವರು ಒಳಗೊಂಡಿದ್ದರ.