ಮಾದಕದ್ರವ್ಯ ಪ್ರಕರಣದ ಆರೋಪಿ ಮನೆಯಿಂದ ಕೋಟ್ಯಂತರ ರೂ. ಮೌಲ್ಯದ ಎಂಡಿಎಂಎ ಪತ್ತೆ
ಕಾಸರಗೋಡು: ರಾಜ್ಯದಲ್ಲಿ ಮಾದಕದ್ರವ್ಯ ಮಾರಾಟ, ಸಾಗಾಟ ಹಾಗೂ ಅವುಗಳ ವ್ಯಸನಿಗಳು ದಿನೇ ದಿನೇ ಹೆಚ್ಚಾಗುತ್ತಿರುವಂತೆಯೇ ಅದನ್ನು ತಡೆಗಟ್ಟಲು ಪೊಲೀಸರು ಮತ್ತು ಅಬಕಾರಿ ತಂಡಗಳು ರಾಜ್ಯದಾ ದ್ಯಂತ ವ್ಯಾಪಕ ಕಾರ್ಯಾಚರಣೆಯಲ್ಲಿ ತೊಡಗಿರುವಂತೆಯೇ ಮಲಪ್ಪುರಂ ನಲ್ಲಿ ಪೊಲೀಸರು ಇಂದು ಮುಂಜಾನೆ ನಡೆಸಿದ ಬೃಹತ್ ಕಾರ್ಯಾಚರ ಣೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಒಂದೂವರೆ ಕಿಲೋ ಮಾದಕದ್ರವ್ಯ ವಾದ ಎಂಡಿಎಂಎ ಪತ್ತೆಹಚ್ಚಿದ್ದಾರೆ.
ಎಂಡಿಎಂಎ ಸಾಗಾಟ ಪ್ರಕರಣ ವೊಂದಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿತನಾಗಿದ್ದ ಮಲಪ್ಪುರಂ ಕರಿಪ್ಪೂರ್ ಮುಕ್ಕೂಟ್ ನಿವಾಸಿ ಮುಳ್ಳನ್ ಮಡಕ್ಕಲ್ ಆಶಿಕ್ ಎಂಬಾತನ ಮನೆಯಲ್ಲಿ ಇಂದು ಮುಂಜಾನೆ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಆರೋಪಿ ಆಶಿಕ್ ಈಗ ಎರ್ನಾಕುಳಂಮಟ್ಟಾಂಚೇರಿ ಪೊಲೀಸರ ವಶದಲಿ ದ್ದಾನೆ. ಪಶ್ಚಿಮ ಕೊಚ್ಚಿಯಲ್ಲಿ ದಿನಗಳ ಹಿಂದೆ 500 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ ಪ್ರಕರಣದಲ್ಲಿ ಆಶಿಕ್ ಪ್ರಧಾನ ಆರೋಪಿಯಾಗಿದ್ದಾನೆ. ಈ ಹಿಂದೆ ಒಮಾನ್‌ನ ಸೂಪರ್ ಮಾರ್ಕೆಟ್‌ನಲ್ಲಿ 5 ವರ್ಷಗಳ ತನಕ ದುಡಿದಿದ್ದ ಆತ ಬಳಿಕ ಊರಿಗೆ ಹಿಂತಿರುಗಿ ಅಲ್ಲಿಂದ ಪಾರ್ಸೆಲ್ ಮೂಲಕ ಎಂಡಿಎಂಎ ಇತ್ಯಾದಿ ಮಾದಕದ್ರವ್ಯ ಕೇರಳಕ್ಕೆ ಸಾಗಿಸುತ್ತಿದ್ದ ಎಂಬುವುದು ತನಿಖೆಯಲ್ಲಿ ಸ್ಪಷ್ಟಗೊಂಡಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಅಂತಾರಾಷ್ಟ್ರೀಯ ಮಾದಕದ್ರವ್ಯ ತಂಡದ ಪ್ರಧಾನ ಕೊಂಡಿಯಾಗಿ ದ್ದಾನೆ. ಈ ಜಾಲದಲ್ಲಿ ಮಹಿಳೆಯರೂ ಸೇರಿದಂತೆ ಹಲವರು ಒಳಗೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಲಪ್ಪುರಂ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯವರ ನೇತೃತ್ವದ ಡ್ಯಾನ್‌ಸಾಫ್ ತಂಡ ಇಂದು ಮುಂಜಾನೆ ಈ ಕಾರ್ಯಾಚರಣೆ ನಡೆಸಿದೆ. ವಿಮಾನ ಮಾರ್ಗವಾಗಿ ಕಾರ್ಗೋ ಮೂಲಕ ಆರೋಪಿ ಆಶಿಕ್ ಕೇರಳಕ್ಕೆ ಮಾದಕದ್ರವ್ಯ ಸಾಗಿಸುತ್ತಿ ದ್ದಾನೆಂಬುದು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ. ಆತನನ್ನು ಪೊಲೀಸರು ಸಮಗ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.