ಮಾದಕದ್ರವ್ಯ ಪ್ರಕರಣದ ಆರೋಪಿ ಸೆರೆ
ಕಾಸರಗೋಡು: ಪ್ರಿವೆನ್ಶನ್ ಆಫ್ ಇಲ್ಲೀಗಲ್ ಟ್ರಾಫಿಕ್ ಆಫ್ ನರ್ಕೋಟಿಕ್ ಡ್ರಗ್ಸ್ (ಪಿಟ್ ಎನ್‌ಡಿಪಿಎಸ್) ಪ್ರಕಾರ ಹಲವು ಮಾದಕದ್ರವ್ಯ ಪ್ರಕರಣಗಳ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್ ಬಂಧಿಸಿದ್ದಾರೆ.
ಮುಟ್ಟತ್ತೋಡಿಗೆ ಸಮೀಪದ ಹಿದಾಯತ್‌ನಗರ ಚಟ್ಟುಂಗುಳಿ ನಿವಾಸಿ ಮೊಹಮ್ಮದ್ ಸಲೀಲ್ (40) ಬಂಧಿತ ಆರೋಪಿ. ಈತನ ವಿರುದ್ಧ ವಿದ್ಯಾನಗರ ಮತ್ತು ಬದಿಯಡ್ಕ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಟ್ ಎನ್‌ಡಿಪಿಎಸ್ ಪ್ರಕಾರ ಬಂಧಿಸಲಾಗುವ ಆರೋಪಿ ಗಳನ್ನು ಯಾವುದೇ ರೀತಿಯ ವಿಚಾರ ಣೆಯೂ ಇಲ್ಲದೆ ಒಂದು ವರ್ಷದ ತನಕ ಜೈಲಿನಲ್ಲಿರಿಸಲಾ ಗುತ್ತಿದೆ. ಇದರಂತೆ ಈಗ ಬಂಧಿತನಾಗಿರುವ ಆರೋಪಿ ಯನ್ನು ತಿರುವನಂತಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.