ಮಾದಕ ದ್ರವ್ಯ ಕೈವಶವಿರಿಸಿದ್ದ ಯುವಕ ಸೆರೆ

ಕಾಸರಗೋಡು: ಕಾಸರ ಗೋಡು ಎಕ್ಸೈಸ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ವಿಷ್ಣು ಪ್ರಕಾಶ್‌ರ ನೇತೃತ್ವದ ಅಬಕಾರಿ ತಂಡ ನಿನ್ನೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯವಾದ 0.43 ಗ್ರಾಮ್ ಮೆಥಾಫಿಟಮಿನ್ ಕೈವಶವಿರಿಸಿಕೊಂಡ ಆರೋ ಪದಂತೆ ನೀರ್ಚಾಲು ಗೋಳಿ ತ್ತಡ್ಕದ ಅಬ್ದುಲ್ ನಾಸರ್ ಜಿ. (31) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಕೇಸು ದಾಖಲಿಸಿ ಕೊಂಡಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ನೌಶಾದ್ ಕೆ, ಇತರ ಸಿಬ್ಬಂದಿಗಳಾದ ರಾಜೇಶ್ ಪಿ, ಅಮಲ್‌ಜಿತ್ ಮತ್ತು ಸ್ವಾತಿ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page