ಮಾದಕ ವಸ್ತು ಸಹಿತ ಓರ್ವ ಸೆರೆ
ಕಣ್ಣೂರು: ಕಾರಿನಲ್ಲಿ ಸಾಗಿಸುತ್ತಿದ್ದ 32.5 ಗ್ರಾಂ ಮೆಥಾಫಿಟ್ಮಿನ್ ಮಾದಕ ವಸ್ತು ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ. ಮಾಟೂಲ್ ನಿವಾಸಿ ಅಹಮ್ಮದ್ ಅಲಿ ಪಿ.ಪಿ (29) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಕೂಟುಪುಳ ಎಕ್ಸೈಸ್ ಚೆಕ್ಪೋಸ್ಟ್ನ ಎಕ್ಸೈಸ್ ಇನ್ಸ್ಪೆಕ್ಟರ್ ಮುಹಮ್ಮದ್ ಶೆಫೀಕ್ ಪಿ.ಕೆ ಹಾಗೂ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಮಾದಕವಸ್ತು ಪತ್ತೆಹಚ್ಚಲಾಗಿದೆ.