ಮಾನವೀಯತೆ ಮೆರೆದ ಪೊಲೀಸರು ಅನಾಥ ವ್ಯಕ್ತಿಗೆ ಮಂಜೇಶ್ವರ ಪೊಲೀಸರಿಂದ ರಕ್ಷಣೆ
ಮಂಜೇಶ್ವರ: ಬೀದಿಯಲ್ಲಿ ಉಪವಾಸವಿದ್ದು, ಅನಾಥವಾಗಿ ತಿರುಗಾಡುತ್ತಿದ್ದ ಕರ್ನಾಟಕ ನಿವಾಸಿಯನ್ನು ಪೊಲೀಸರು ಠಾಣೆಗೆ ಕರೆತಂದು ಆಹಾರ ನೀಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಮಂಜೇಶ್ವರ ಪೊಲೀಸ್ ಅಧಿಕಾರಿಗಳು ಹಾಗೂ ಜೀಪು ಚಾಲಕ ಮಾನವೀಯತೆ ಮೆರೆದಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಆತ ಅನಾಥನಾಗಿದ್ದಾನೆಂದು ತಿಳಿದುಬಂದಿದ್ದು, ಉಪವಾಸವಿದ್ದ ಹಿನ್ನೆಲೆಯಲ್ಲಿ ಹೋಟೆಲ್‌ನಿಂದ ಆಹಾರ ತರಿಸಿ ನೀಡಲಾಗಿದೆ. ಎಎಸ್‌ಐ ಇಸ್ಮಾಯಿಲ್ ಇದಕ್ಕೆ ಬೆಂಬಲ ನೀಡಿದ್ದಾರೆ. ಅನಾರೋಗ್ಯ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಿ ಅನಾಥ ಮಂದಿರಕ್ಕೆ ಒಪ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯ ಈ ಮಾನವೀಯತೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.