ಮಾನ್ಯ ಚೌಡೇಶ್ವರಿ ಕ್ಷೇತ್ರ ಪ್ರತಿಷ್ಠಾ ವಾರ್ಷಿಕೋತ್ಸವ ಮೇ 4ರಿಂದ
ಬದಿಯಡ್ಕ: ಮಾನ್ಯ ಶ್ರೀ ವಿಷ್ಣುಮೂರ್ತಿ ನಗರ ಶ್ರೀ ಚೌಡೇಶ್ವರೀ ಕ್ಷೇತ್ರದ ದ್ವಿತೀಯ ಪ್ರತಿಷ್ಠಾವಾರ್ಷಿ ಕೋತ್ಸವ ಮೇ.4ರಿಂದ 6ರ ತನಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆÀ. 4ರಂದು ಪ್ರಾತಃಕಾಲ 6.10ಕ್ಕೆ ದೀಪಪ್ರಜ್ವಲನೆ, ನಿವೃತ್ತ ಅಮೀನ್ ರಾಮನಾಯ್ಕ ಅವರಿಂದ ಚಾಲನೆ, ಚೌಡೇಶ್ವರೀ ಭಕ್ತವೃಂದದ ವರಿಂದ ಭಜನೆ ಪ್ರಾರಂಭ, ಸೂರ್ಯೋದಯದಿಂದ ಸೂರ್ಯಾ ಸ್ತಮಾನದ ತನಕ ವಿವಿಧ ಭಜನಾ ಸಂಘಗಳಿAದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ 6.40ಕ್ಕೆ ಅರ್ಧಏಕಾಹ ಭಜನೆ ಸಮಾಪ್ತಿ, ಮಹಾಪೂಜೆ, 7.15ಕ್ಕೆ ಧಾರ್ಮಿಕ ಸಭೆ ನಡೆÀÀಯಲಿದೆÀ. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಅವರಿಂದ ಉದ್ಘಾಟನೆ, ವಸಂತ ಮೇಗಿನಡ್ಕ ಅಧ್ಯಕ್ಷತೆಯಲ್ಲಿ ವಿಎಚ್‌ಪಿ ಮಾತೃಶಕ್ತಿ ಕಣ್ಣೂರು ವಿಭಾಗ ಸಂಯೋಜಕಿ ಮೀರ ಆಳ್ವ ಅವರಿಂದ ಧಾರ್ಮಿಕ ಭಾಷಣ, ಮುಖ್ಯ ಅತಿಥಿಗಳಾಗಿ ಡಾ| ಶ್ಯಾಂಭವಿ ಎಚ್. ಪಾಲ್ಗೊಳ್ಳಲಿದ್ದಾರೆ. ನಿವೃತ್ತ ಅಧ್ಯಾಪಿಕೆ ಹೇಮ ಕುಮಾರಿ ಕಾಸರಗೋಡು, ಆಡಿಟ್ ಆಫೀಸರ್ ಗೋಪಾಲಕೃಷ್ಣ ಮೇಗಿನಡ್ಕ, ಅಧ್ಯಾಪಿಕೆ ಬಿಂದು ಟಿ.ಕೆ. ಶುಭಾಶಂಸನೆಗೈಯುವರು. ರಾತ್ರಿ ಅನ್ನಸಂತರ್ಪಣೆ, 9.15ರಿಂದ ಯುವ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, 10.15ಕ್ಕೆ ನುರಿತ ಕಲಾವಿದೆಯರಿಂದ ಭರತನಾಟ್ಯ, ಕೂಚುಪುಡಿ ನೃತ್ಯ ಪ್ರದರ್ಶನಗೊಳ್ಳಲಿದೆ. 5ರಂದು ಬೆಳಗ್ಗೆ ಗಣಪತಿ ಹೋಮ, 8.15ಕ್ಕೆ ಲೋಕಕಲ್ಯಾಣಾರ್ಥ ಚಂಡಿಕಾ ಹೋಮ ಪ್ರಾರಂಭ, 11.30ಕ್ಕೆ ಚಂಡಿಕಾಹೋಮ ಪೂರ್ಣಾಹುತಿ ನಡೆಯಲಿದೆ. 11.45ಕ್ಕೆ ಶ್ರೀದೇವಿಗೆ ಅಲಂಕಾರ ಪ್ರಭಾವಳಿ ಸಮರ್ಪಣೆ, ಚೌಡೇಶ್ವರಿ ದೇವಿಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
11.30ಕ್ಕೆ ಜಯರಾಮ ದೇವಸ್ಯ ಇವರ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಭೃಗುಶಾಪ, ಸಂಜೆ 7 ಗಂಟೆಗೆ ಮಹಾಪೂಜೆ 7.15ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಹಾಗೂ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಆಶೀರ್ವಚನ ನೀಡಲಿದ್ದಾರೆ. ಡಾ| ಎಂ.ಪಿ. ಹೃಷಿಕೇಶ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಮಧುಸೂದನ ಆಯರ್ ಮಂಗಳೂರು ಪಾಲ್ಗೊಳ್ಳಲಿದ್ದಾರೆ. ಸುರೇಂದ್ರ ಪಿ., ಎಂ. ನಾರಾಯಣ ಮಾಸ್ತರ್ ಮಂಗಳೂರು ಶುಭಾಶಂಸನೆಗೈ ಯಲಿದ್ದಾರೆ. ಹೆಡ್ ಕಾನ್ಸ್ಟೇಬಲ್ ರಾಮದಾಸ್ ಎಂ.ಆರ್., ಕಾಸರಗೋಡು ಲೋಟರಿ ಏಜನ್ಸಿಯ ಪ್ರವೀಣ್ ಕುಮಾರ್ ಡಿ. ಉಪಸ್ಥಿತರಿರುವರು. ರಾತ್ರಿ ಅನ್ನಸಂತರ್ಪಣೆ, 9.30ರಿಂದ ಮಂಜುಶ್ರೀ ಕಲಾವಿದರು ಕುಡ್ಲ ಅಭಿನಯದ ಸೇವಾರತ್ನ ಮನೋಜ್ ಕುಲಾಲ್ ರಚಿಸಿ ನಟಿಸಿ ನಿರ್ದೇಶೀಸಿರುವ ತುಳು ನಾಟಕ ‘ಆಯಿನಾತ್ ಬೇಗ ಪನ್ಪೆ’ ಪ್ರದರ್ಶನಗೊಳ್ಳಲಿದೆ. 6ರಂದÀÄ ಬೆಳಗ್ಗೆ 10 ಗಂಟೆಗೆ ಚೌಡೇಶ್ವರಿ ದೇವಿಗೆ ಮಹಾಪೂಜೆ, 11ರಿಂದ ಸಂಪ್ರೀತಿ ಮೆಲೋಡೀಸ್ ಪುತ್ತೂರು ಇವರಿಂದ ಭಕ್ತಿಭಾವ ರಸಮಂಜರಿ, 2.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.