ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಭಜನಾಮಂದಿರದಿಂದ ೬ ಲಕ್ಷ ರೂ. ಬೆಲೆಬಾಳುವ ಬೆಳ್ಳಿ ರಜತ ಛಾಯಾಚಿತ್ರ ಹಾಗೂ ಬೆಳ್ಳಿ ರುದ್ರಾಕ್ಷಿ ಮಾಲೆ, ನಗದು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸೆರೆ ಹಿಡಿಯಲಾಗಿದೆ. ಕರ್ನಾಟಕ, ಕಸಬ ತಾಲೂಕಿನ ಪೊಯ್ಲ ಆತೂರು, ಕಳಾಯಿ ಹೌಸ್‌ನ ಇಬ್ರಾಹಿಂ ಕಲಂದರ್ ಅಲಿಯಾಸ್ ಕೆ. ಇಬ್ರಾಹಿಂ (42)ನನ್ನು ಬದಿಯಡ್ಕ ಪೊಲೀಸರು ಸೆರೆ ಹಿಡಿದಿದ್ದಾರೆ. ಈತನನ್ನು ವಿಚಾರಣೆಗೊಳಪ ಡಿಸಲಾಗುತ್ತಿದೆ. ನವೆಂಬರ್ ೪ರಂದು ಮುಂಜಾನೆ ಭಜನಾ ಮಂದಿರದಿಂದ ಕಳವು ನಡೆಸಲಾಗಿತ್ತು. ಅಂದೇ ನೆಲ್ಲಿಕಟ್ಟೆ ಗುರುದೇವ ಕ್ಷೇತ್ರ, ಪೊಯಿನಾಚಿ ಶ್ರೀ ಅಯ್ಯಪ್ಪ ಕ್ಷೇತ್ರ ಎಂಬೆಡೆಗಳಿಂದಲೂ ಕಳವು ನಡೆಸಿದ ತಂಡದಲ್ಲಿ ಇಬ್ರಾಹಿಂ ಕಲಂದರ್ ಇದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾಸರಗೋಡು ಪೊಲೀಸ್ ಸಬ್ ಡಿವಿಶನ್‌ನ ಎಡನೀರು ವಿಷ್ಣುಮಂಗಲ ಕ್ಷೇತ್ರದಲ್ಲಿ ಇತ್ತೀಚೆಗಿ ನಿಂದ ಪ್ರಥಮವಾಗಿ ಕಳವು ನಡೆದಿತ್ತು. ಈ ಪ್ರಕರಣದಲ್ಲಿನ ಆರೋಪಿಗಳನ್ನು ಪತ್ತೆಹಚ್ಚಲಿರುವ ಯತ್ನದ ಮಧ್ಯೆ ಇತರ ಮೂರು ಕಡೆಗಳಲ್ಲೂ ಕಳವು ನಡೆದಿತ್ತು. ಬಳಿಕ ಬಂಟ್ವಾಳದ ಎರಡು ಕ್ಷೇತ್ರಗಳಲ್ಲೂ ಇದಕ್ಕೆ ಸಮಾನವಾದ ರೀತಿಯಲ್ಲಿ ಕಳವು ನಡೆದಿತ್ತು. ಇದೆಲ್ಲವುಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸುತ್ತಿದ್ದ ಮಧ್ಯೆ ಕಾಸರಗೋಡಿನ ಹಣಕಾಸು ಸಂಸ್ಥೆಯೊಂದನ್ನು ಕೊಳ್ಳೆ ಹೊಡೆಯಲು ತಂಡವೊಂದು ತಲುಪುತ್ತಿದೆ ಎಂಬ ರಹಸ್ಯ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ನಾಗರಿಕರ ಸಹಾಯದೊಂದಿಗೆ ಜಾಗೃತೆ ಪಾಲಿಸುತ್ತಿದ್ದ ಮಧ್ಯೆ ಆದಿತ್ಯವಾರ ಮುಂಜಾನೆ ತಂಡವೊಂದು ನಂಬರ್ ಪ್ಲೇಟ್‌ಇಲ್ಲದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯೆ ದೈಗೋಳಿಯಲ್ಲಿ ಪೊಲೀಸರ ವಶಕ್ಕೆ ಬಿದ್ದಿದೆ. ಮಂಗಳೂರು ಕೋಡಿ ಉಳ್ಳಾಲ ನಿವಾಸಿ ಫೈಸಲ್, ತುಮಕೂರು ನಿವಾಸಿ ಸೈಯ್ಯೀದ್ ಆಮನ್ ಎಂಬಿವರನ್ನು ಕಾರಿನಿಂದ ಸೆರೆ ಹಿಡಿಯಲಾಯಿತಾ ದರೂ ಅದರಲ್ಲಿದ್ದ ಇತರ ನಾಲ್ಕು ಮಂದಿ ಪರಾರಿಯಾಗಿದ್ದರು. ಪರಾರಿಯಾದ ನಾಲ್ಕು ಮಂದಿಯಲ್ಲಿ ಓರ್ವ ಈಗ ಸೆರೆಯಾದ ಇಬ್ರಾಹಿಂ ಕಲಂದರ್ ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಉಳಿದ ಮೂರು ಮಂದಿ ಗಾಗಿ ಹುಡುಕಾಟ ನಡೆಸಲಾಗುತ್ತಿದೆ. ತಂಡ ಸಂಚರಿಸುತ್ತಿದ್ದ ಕಾರಿನಿಂದ ಗ್ಯಾಸ್ ಕಟ್ಟರ್ ಸಹಿತವಿರುವ ಮಾರಕಾಯುಧಗಳನ್ನು ವಶ ಪಡಿಸಲಾಗಿತ್ತು. ದೈಗೋಳಿಯಿಂದ ಪಾರಾದ ತಂಡವೇ 2024 ಫೆಬ್ರ ವರಿ 8ರಂದು ಕರ್ನಾಟಕ ಬ್ಯಾಂ ಕ್‌ನ ಅಡ್ಯನಡ್ಕ ಬ್ರಾಂಚ್ ನಿಂದಲೂ ಕಳವು ನಡೆಸಿರುವುದಾಗಿ ತಿಳಿದು ಬಂದಿದೆ. ಅಂದು ಸೆರೆಯಾದ ತಂಡ ಜಾಮೀನಿನಲ್ಲಿ ಹೊರ ಬಂದ ಬಳಿಕ ಮತ್ತೆ ಕಳವಿಗೆ ತೊಡಗಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.







