ಮಾರಕಾಯುಧಗಳ ಸಹಿತ ತಲುಪಿ ಕಳವಿಗೆತ್ನ :ದೈಗೋಳಿಯಲ್ಲಿ ಪೊಲೀಸರ ಕಾರ್ಯಾಚರಣೆ ವೇಳೆ ಪರಾರಿಯಾದ ಇನ್ನೋರ್ವ ಆರೋಪಿ ಕಸ್ಟಡಿಗೆ
ಉಪ್ಪಳ: ಕೊಡ್ಲಮೊಗರು ದೈಗೋಳಿಯಲ್ಲಿ ಇತ್ತೀಚೆಗೆ ಮಾರಕಾಯುಧಗಳ ಸಹಿತ ಕಳವಿಗೆ ತಲುಪಿದ್ದ ತಂಡದಲ್ಲಿದ್ದ ಇನ್ನೋರ್ವ ನನ್ನು ಮಂಜೇಶ್ವರ ಪೊಲೀಸರು ಮಂಗಳೂರು ಜೈಲಿನಿಂದ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ದ.ಕ. ಜಿಲ್ಲೆಯ ಬಂಟ್ವಾಳ ಪುದು ಎಂಬಲ್ಲಿನ ಸಾದತ್ ಅಲಿ (30) ಎಂಬಾ
ತನನ್ನು ಮಂಜೇಶ್ವರ ಇನ್‌ಸ್ಪೆಕ್ಟರ್ ಅನೂಬ್ ನೇತೃತ್ವದ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ.
ನವಂಬರ್ 10ರಂದು ಮುಂಜಾನೆ ದೈಗೋಳಿಯಲ್ಲಿ ನಾಗರಿಕರ ಸಹಾಯದೊಂದಿಗೆ ಮಂಜೇಶ್ವರ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ತಲುಪಿದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಮಾರಕಾಯುಧಗಳು ಪತ್ತೆಯಾಗಿತ್ತು. ಈ ವೇಳೆ ಕಾರಿನಲ್ಲಿದ್ದ ಕರ್ನಾಟಕದ ತುಮಕೂರು ಜಿಲ್ಲೆ ಸಿರಾ ಗ್ರಾಮದ ಮೊಹಲ್ಲ ಕಚೇರಿ ಎಂಬಲ್ಲಿನ ಸಯಿದ್ ಅಮಾನ್ (22), ಮಂಗಳೂರು ಉಳ್ಳಾಲ ಕೋಡಿ ಹೌಸ್‌ನ ಫೈಸಲ್ (36) ಎಂಬಿವರನ್ನು ಬಂಧಿಸಲಾಗಿತ್ತು.
ಇದೇ ವೇಳೆ ಅಲ್ಲಿಂದ ಪರಾರಿಯಾದ ಸಾದತ್ ಅಲಿಯನ್ನು ಬೇರೊಂದು ಕಳವಿಗೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಸೆರೆಹಿಡಿದಿದ್ದರು. ಆತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿತ್ತು. ಈ ಬಗ್ಗೆ ತಿಳಿದ ಮಂಜೇಶ್ವರ ಪೊಲೀಸರು ನಿನ್ನೆ ಮಂಗಳೂರು ಜೈಲಿನಿಂದ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ದೈಗೋಳಿಯಿಂದ ಪರಾರಿಯಾದ ಇನ್ನೋರ್ವ ಆರೋಪಿ ಕರ್ನಾಟಕದ ಪುತ್ತೂರು ಕಡಬದ ಇಬ್ರಾಹಿಂ ಕಲಂದರ್ ಎಂಬಾತನನ್ನು ಇತ್ತೀಚೆಗೆ ಬಂಧಿಸಲಾಗಿತ್ತು.