ಮಾರಾಟಕ್ಕಾಗಿ ಮಾದಕ ಪದಾರ್ಥ ಸಾಗಾಟ: ದಂಪತಿ ಸೆರೆ

ಆಲಪ್ಪುಳ: ಎಂಡಿಎಂಎ ಸಹಿತ ದಂಪತಿ ಸೆರೆಯಾಗಿದ್ದಾರೆ. ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾದ ಕೆ. ಸಿಯಾ (40), ಪತ್ನಿ ಸಂಜು ಮೋಳ್ (39) ಎಂಬಿವರನ್ನು ಆಲಪ್ಪುಳ ಪೊಲೀಸರು ಬಂಧಿಸಿದ್ದಾರೆ. ಇವರಿಂದ ೧೩ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಆಪರೇಷನ್ ಡಿಹಂಟ್‌ನಂಗವಾಗಿ ರೈಲ್ವೇ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎಂಬೆಡೆಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಇವರಿಬ್ಬರೂ ಸೆರೆಯಾಗಿದ್ದಾರೆ. ಮಾರಾಟಕ್ಕಾಗಿ ಮಾದಕ ಪದಾರ್ಥಗಳನ್ನು ಸಾಗಿಸುತ್ತಿ ರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸಿಯಾ ಹಲವು ತಿಂಗಳು ಗಳಿಂದ ಅನ್ಯರಾಜ್ಯಗಳಿಂದ ಮಾದಕ ಪದಾರ್ಥಗಳನ್ನು ಊರಿಗೆ ತಂದು ಮಾರಾಟ ಮಾಡುತ್ತಿರುವು ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು.

You cannot copy contents of this page