ಮಾರುಕಟ್ಟೆಯಲ್ಲಿರುವ ಬಾಟ್ಲಿ ನೀರು ತಪಾಸಿಸಿ ನಾಲ್ಕು ಬ್ರಾಂಡ್‌ಗಳ ವಿರುದ್ಧ ಆಹಾರ ಭದ್ರತಾ ಇಲಾಖೆಯಿಂದ ಕೇಸು
ಕಾಸರಗೋಡು: ಮಾರುಕಟ್ಟೆಯಲ್ಲಿನ ಬಾಟ್ಲಿ ನೀರನ್ನು ಪರಿಶೀಲಿಸಬೇಕೆಂಬ ಜಿಲ್ಲಾ ವಿಜಿಲೆನ್ಸ್ ಸಮಿತಿ ನಿರ್ದೇಶದ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಇಲಾಖೆ ತಪಾಸಣೆ ನಡೆಸಿ ನಾಲ್ಕು ಬ್ರಾಂಡ್‌ಗಳ ವಿರುದ್ಧ ಕೇಸು ದಾಖಲಿಸಿದೆ. ಒಂದು ಪ್ಲಾಂಟ್‌ನ್ನು ಮುಚ್ಚಲು ಆದೇಶಿಸಿ ರುವುದಾಗಿ ರಾಜ್ಯ ಆಹಾರ ಆಯೋಗದ ಸದಸ್ಯೆ ಎಂ. ವಿಜಯಲಕ್ಷ್ಮಿ ತಿಳಿಸಿದರು. ಜಿಲ್ಲಾ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ಅವರು ಮಾತ ನಾಡುತ್ತಿದ್ದರು. ಜಿಲ್ಲೆಯ ತಾಲೂಕು ಮಟ್ಟದ ವಿಜಿಲೆನ್ಸ್ ಸಮಿತಿ ಗಳು ಕಾರ್ಯ ದಕ್ಷತೆಯಿಂದ ಕಾರ್ಯಾ ಚರಿಸುತ್ತಿರುವು ದಾಗಿಯೂ, ರೇಶನ್ ಅಂಗಡಿ ಹಂತದಲ್ಲಿ ರುವ ವಿಜಿಲೆನ್ಸ್ ಸಮಿತಿಗಳು ಸಕ್ರಿಯವಾಗಿ ದೆಯೆಂದು ಅವರು ನುಡಿದರು. ಜಿಲ್ಲೆಯಲ್ಲಿ ಮನೆ ಬಾಗಿಲಿಗೆ ರೇಶನ್ ವಿತರಣೆ ಕೂಡಲೇ ಪೂರ್ತಿಗೊಳಿಸಲಾಗುವುದು. ಮಂಜೇಶ್ವರ ತಾಲೂಕಿನ 80 ಶೇ. ವಿತರಣೆ ಈಗಾಗಲೇ ಪೂರ್ತಿಗೊಂಡಿದೆ. ಕಾಸರ ಗೋಡು, ಹೊಸದುರ್ಗ ತಾಲೂಕಿನ 70 ಶೇ. ಹಾಗೂ ವೆಳ್ಳೆರಿಕುಂಡ್ ತಾಲೂಕಿನ 30 ಶೇ. ಮನೆ ಬಾಗಿಲಿಗೆ ವಿತರಣೆ ಪೂರ್ತಿ ಗೊಂಡಿದೆ. ಜಿಲ್ಲಾಧಿಕಾರಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಡಿಎಂ ಕೆ.ವಿ. ಶುತಿ ಅಧ್ಯಕ್ಷತೆ ವಹಿಸಿ ದರು. ಜಿಲ್ಲಾ ಸಪ್ಲೈ ಅಧಿಕಾರಿಯ ಹೊಣೆ ಯಿರುವ ಎಸ್. ಸುಜ, ತಾಲೂಕು ಸಪ್ಲೈ ಅಧಿಕಾರಿಗಳಾದ ಜಿ. ಮಾಧವನ್ ಪೋತಿ, ಎಂ. ಗಂಗಾಧರನ್, ಕೆ.ಪಿ. ಬಾಬು, ಸಮಾಜ ಸೇವಕರಾದ ಪಿ.ವಿ. ಮ್ಯಾಥ್ಯು, ಚಂದ್ರ ಅರಂಗಾಡಿ, ಎಂ. ಕುಂಞಂಬು ನಂಬ್ಯಾರ್ ಮಾತನಾಡಿದರು.