ಮಾಲಿಯಲ್ಲಿ ಅಲ್‌ಖೈದಾ ಭಯೋತ್ಪಾದಕರ ದಾಳಿ: ಮೂವರು ಭಾರತೀಯರ ಅಪಹರಣ
ನವದೆಹಲಿ: ಮಾಲಿ ಗಣರಾಜ್ಯದ ಕೇಯ್ಸ್ನನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆ ಯಲ್ಲಿ ದುಡಿಯುತ್ತಿರುವ ಮೂವರು ಭಾರತೀಯ ಪ್ರಜೆಗಳನ್ನು ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್‌ಖೈದಾ ಭಯೋತ್ಪಾದಕರ ಗುಂಪು ಅಪಹರಿಸಿದೆಯೆಂದು ವಿದೇಶಾಂಗ ಸಚಿವಾಲಯಕ್ಕೆ ನಿನ್ನೆ ತಡರಾತ್ರಿ ಮಾಹಿತಿ ಲಭಿಸಿದ್ದು ಇದು ಅತ್ಯಂತ ಗಂಭೀರ ವಿಷಯವಾಗಿದೆ ಯೆಂದು ಹೇಳಿದೆ.
ಕೇಯ್ಸ್ನನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಗೆ ಜುಲೈ 1ರಂದು ಅಲ್‌ಖೈದಾ ಭಯೋತ್ಪಾ ದಕರು ಸಶಸ್ತ್ರದಾರಿಗಳಾಗಿ ನುಗ್ಗಿ ದಾಳಿ ನಡೆಸಿ ಆ ಕಾರ್ಖಾನೆಯಲ್ಲಿ ದುಡಿ ಯುತ್ತಿರುವ ಮೂವರು ಭಾರತೀಯ ಪ್ರಜೆಗಳನ್ನು ಅಪಹರಿಸಿ ದ್ದಾರೆ. ಅವರನ್ನು ಈ ಭಯೋತ್ಪಾದ ಕರು ಈಗ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಇದಾದ ಬೆನ್ನಲ್ಲೇ ರಕ್ಷಣಾ ಕಾರ್ಯವನ್ನೂ ಆರಂಭಿಸಲಾಗಿದೆ.
ಅಲ್‌ಖೈದಾ ಸಂಬಂಧಿತ ಜಮಾ ಯತ್ ನುಸ್ರತ್ ಅಲ್ ಇಸ್ಲಾಂ ವಾಲ್ ಮುಸ್ಲಿಮಿನ್ (ಜೆಎನ್‌ಐಎಂ) ಉಗ್ರ ಗಾಮಿ ಗುಂಪುಗಳು ಮಾಲಿಗಣ ರಾಜ್ಯದ ಪಶ್ಚಿಮ ಮತ್ತು ಮಧ್ಯ ಪ್ರದೇಶಗಳಲ್ಲಿನ ಹಲವಾರು ಮಾಲಿಯನ್ ಸೇನಾ ನೆಲೆಗಳ ಸಂಘಟಿತ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.