ಮಾಳಂಗೈಯಲ್ಲಿ ಮನೆಗೆ ಸ್ಫೋಟಕ ವಸ್ತು ಎಸೆತ
ಬದಿಯಡ್ಕ: ಬೈಕ್‌ನಲ್ಲಿ ತಲುಪಿದ ತಂಡ ಮನೆಗೆ ಸ್ಫೋಟಕವಸ್ತು ಎಸೆದಿರುವುದಾಗಿ ದೂರಲಾಗಿದೆ. ನೆಕ್ರಾಜೆ ಮಾಳಂಗೈಯ ಎಂ.ಎ. ಮಂಜಿಲ್ ನಿವಾಸಿ ಮುಹಮ್ಮದ್ ಕುಂಞಿಯ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಸಂಜೆ 6.50ಕ್ಕೆ ಘಟನೆ ನಡೆದಿದೆ. ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ತಲುಪಿದ ತಂಡ ಮನೆ ಹಿತ್ತಿಲಿಗೆ ಪ್ರವೇಶಿಸಿದ ಬಳಿಕ ದೂರುಗಾರ ಹಾಗೂ ಕುಟುಂಬ ವಾಸಿಸುವ ಮನೆಗೆ ಸ್ಫೋಟಕವಸ್ತು ಎಸೆದಿರುವುದಾಗಿ ಬದಿಯಡ್ಕ ಪೊಲೀಸರು ದಾಖಲಿಸಿದ ಕೇಸಿನಲ್ಲಿ ತಿಳಿಸಲಾಗಿದೆ. ದೂರುಗಾರನ ಪುತ್ರ ಅನ್ಯಮತೀಯ ಯುವತಿಯನ್ನು ವಿವಾಹವಾದ ದ್ವೇಷದಿಂದ ಆಕ್ರಮಣ ನಡೆಸಿರಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿ ದ್ದಾರೆ. ಸಿಸಿ ಟಿವಿ ಕ್ಯಾಮರಾಗಳಲ್ಲಿ ದಾಖಲುಗೊಂಡ ದೃಶ್ಯಗಳನ್ನು ಪರಿಶೀ ಲಿಸಲಿರುವ ಕ್ರಮ ಆರಂಭಿಸಲಾಗಿದೆ.