ಮಾವನ ತಲೆಗೆ ಹೊಡೆದು ಕೊಲೆ

ಕಾಸರಗೋಡು: ಅಳಿಯ ಮಾವನ ತಲೆಗೆ ಹೊಡೆದು ಕೊಲೆಗೈದ ಘಟನೆ ತೃಕ್ಕರಿಪುರ ಬಳಿ ಇಂದು ಬೆಳಿಗ್ಗೆ ನಡೆದಿದೆ.

ತೃಕ್ಕರಿಪುರ ಪರುತ್ತಿಚ್ಚಾಲ್ ನಿವಾಸಿ ಕೇಳಪ್ಪನ್ ಎಂಬವರ ಪುತ್ರ ಬಾಲಕೃಷ್ಣನ್ (೫೪) ಎಂಬವರು ಕೊಲೆಗೈಯ್ಯಲ್ಪಟ್ಟ ವ್ಯಕ್ತಿ. ಇವರು ಇಂದು ಬೆಳಿಗ್ಗೆ ಮನೆಯಲ್ಲಿ  ತಲೆಗೆ ಏಟು ಬಿದ್ದು ಗಂಭೀರಾವಸ್ಥೆಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ನೀಡಿದರೂ  ಆ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತ ಬಾಲಕೃಷ್ಣನ್ ವೆಲ್ಡಿಂಗ್ ಕಾರ್ಮಿಕನಾ ಗಿದ್ದಾರೆ. ಪತ್ನಿಯೊಂದಿಗೆ  ವಿರಸಗೊಂಡು ಅವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.  ಅವರ ಹಿರಿಯ ಪುತ್ರಿಯ ಪತಿ ತೃಕ್ಕರಿಪುರ ವೈಖತ್ ಹೌಸ್‌ನ ರತೀಶ್‌ನೊಂದಿಗೆ  ಆಸ್ತಿ ಕುರಿತಾದ ವಿವಾದವೇರ್ಪಟ್ಟಿತ್ತು.  ನಿನ್ನೆ ರಾತ್ರಿ ಇವರು  ರತೀಶ್‌ನನ್ನು ಮನೆಗೆ ಕರೆಸಿದ್ದರೆಂದೂ  ಬಳಿಕ ಅವರಿಬ್ಬರೊಳಗೆ ಮದ್ಯ ಸೇವಿಸಿ ಅಮಲಿನಲ್ಲಿ ವಾಗ್ವಾದವೇರ್ಪಟ್ಟು ಆ ವೇಳೆ ರತೀಶ್  ಬಾಲಕೃಷ್ಣನ್‌ರ ತಲೆಗೆ ಹೊಡೆದರೆಂದು ಆರೋಪಿಸಲಾಗಿದೆ. ಚಂದೇರ ಪೊಲೀಸ್ ಇನ್‌ಸ್ಪೆಕ್ಟರ್ ಜಿ.ಪಿ. ಮನುರಾಜ್, ಎಸ್‌ಐ ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ಕೊಲೆ ನಡೆದ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜಿಗೆ ಸಾಗಿಸಲಾಗಿದೆ.

You cannot copy contents of this page