ಮಾಸ್ತಿಕುಂಡ್‌ನ ಮನೆಯಿಂದ ಬೆಳ್ಳಿ ಸಾಮಗ್ರಿ ವಾಚ್, ನಗದು ಕಳವು
ಬೋವಿಕ್ಕಾನ: ಮನೆಯವರು ಮದುವೆ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಿ ವಿವಿಧ ಸೊತ್ತುಗಳನ್ನು ದೋಚಿದ ಘಟನೆ ಮಾಸ್ತಿಕುಂಡ್‌ನಲ್ಲಿ ನಡೆದಿದೆ. ಮಾಸ್ತಿ ಕುಂಡ್ ನಿವಾಸಿ ಅನಿವಾಸಿ ನೌಫಲ್‌ರ ಮನೆಯಲ್ಲಿ ಈ ಕಳವು ನಡೆದಿದೆ. ಮನೆಯಲ್ಲಿ ನೌಫಲ್‌ರ ಪತ್ನಿ ತಾಹಿರ ಹಾಗೂ ಮಕ್ಕಳು ವಾಸಿಸುತ್ತಿದ್ದಾರೆ. ಅವರು ಕಳೆದ ಗುರುವಾರ ಮನೆಗೆ ಬೀಗ ಜಡಿದು ತಳಿಪರಂಬದ ಸಂಬಂಧಿಕರ ಮದುವೆಗಳಿಗೆ ತೆರಳಿದ್ದರು. ಇಂದು ಬೆಳಿಗ್ಗೆ ಮರಳಿ ಮನೆಗೆ ತಲುಪಿದಾಗ ಕಳವು ನಡೆದಿರುವುದು ತಿಳಿದು ಬಂದಿದೆ. ಮುಂಭಾಗದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಪಾಟಿನಲಿದ್ದ ಬೆಳ್ಳಿಯ ಆಭರಣಗಳು, ಸುಮಾರು 10 ಸಾವಿರ ರೂಪಾಯಿ, ರೇಡೋ ಸಹಿತ ವಿವಿಧ ವಾಚ್‌ಗಳನ್ನು ದೋಚಿದ್ದಾರೆ. ಕಪಾ?ಟಿನಲ್ಲಿದ್ದ ಬಟ್ಟೆಬರೆ ಸಹಿತ ವಿವಿಧ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ. ವಿಷಯ ತಿಳಿದು ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.