ಮಾಹಿತಿ ಹಕ್ಕು ಕಾರ್ಯಕರ್ತ ಸುಬ್ರಹ್ಮಣ್ಯ ನಾಯಕ್ ನಿಧನ

ಕುಂಬಳೆ: ಭ್ರಷ್ಟಾಚಾರ ವಿರುದ್ಧ ಹೋರಾಡಿದ ಕುಂಬಳೆ ಮಾಹಿತಿ ಹಲ್ಲು ಕಾರ್ಯಕರ್ತ, ಕಂಚಿಕಟ್ಟೆ ದುರ್ಗಾಂಭಾ ರಸ್ತೆಯ ಸುಬ್ರಹ್ಮಣ್ಯ ನಾಯಕ್ (೬೫) ನಿಧನಹೊಂದಿದರು.

ಇಂದು ಮುಂಜಾನೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾ ಸಹಕಾರಿ ಆಸ್ಪತ್ರೆಗೂ ಬಳಿಕ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿ ಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ  ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬದಿಯಡ್ಕದಲ್ಲಿ ಸಂಸ್ಥೆಯೊಂದನ್ನು ನಡೆಸಿದ್ದರು.  ಭ್ರಷ್ಟಾಚಾರದ ವಿರುದ್ಧ ನಿಲುವು ಹೋರಾಟ ನಡೆಸುತ್ತಿದ್ದ ಇರು ಅಧಿಕಾರಿಗಳಿಗೆ, ರಾಜಕೀಯದವರಿಗೆ ಕಣ್ಣಿನ ಕಸವಾಗಿದ್ದರು. ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಸಿದ್ದಕ್ಕೆ ಇವರಿಗೆ ಬೆದರಿಕೆ, ಆಕ್ರಮಣವನ್ನು ಎದುರಿಸಬೇಕಾಗಿ ಬಂದಿತ್ತು.ಮೃತರು ಪತ್ನಿ ಮಮತಾ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

You cannot copy contents of this page