ಮೀಂಜ ಪಂಚಾಯತ್ ಕೇರಳೋತ್ಸವ
ಮೀಂಜ: ಪಂಚಾಯತ್ ಮಟ್ಟದ ಕೇರಳೋತ್ಸವ ನಿನ್ನೆ ರಾತ್ರಿ ಕುಲೂರುನಲ್ಲಿ ಆರಂಭಗೊಂಡಿತು. ಹಗ್ಗಜಗ್ಗಾಟ ಪಂದ್ಯಾಟದೊಂದಿಗೆ ಸ್ಪರ್ಧೆ ಆರಂಭಗೊಂಡಿತು.
ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರಸ್ವತಿ, ಬಾಬು ಕುಲೂರು, ಸದಸ್ಯ ಜನಾರ್ದನ ಪೂಜಾರಿ, ಬ್ಲೋಕ್ ಪಂಚಾಯತ್ ಸದಸ್ಯ ಕೆ.ವಿ. ಭಟ್, ಶಾಲಾ ಮೆನೇಜರ್ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪಂಚಾಯತ್ ಕಾರ್ಯದರ್ಶಿ ಸುರೇಶ ಎನ್.ಎ., ನಾರಾಯಣ ನಾಯ್ಕ ನಡುಹಿತ್ತಿಲು ವಿಶ್ವನಾಥ ಶೆಟ್ಟಿ ಉಮಿಕಳ, ಲೋಕೇಶ ಚಿನಾಲ, ಹರೀಶ ಶೆಟ್ಟಿ ಕಡಂಬಾರು ಭಾಗವಹಿಸಿದ್ದರು. ಪಂದ್ಯಾಟ ನವಯುವಕ ಕಲಾವೃಂದ ಚಿನಾಲ ಹಾಗೂ ಫ್ರೆಂಡ್ಸ್ ಕುಲೂರು ತಂಡದ ನೇತೃತ್ವ ವಹಿಸಿತು.