ಮೀಂಜ, ಪೈವಳಿಕೆಯಲ್ಲಿ ಉಮ್ಮನ್ ಚಾಂಡಿ ಸಂಸ್ಮರಣೆ
ಮೀಂಜ : ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಪ್ರಥಮ ಸಂಸ್ಮರಣೆ ಗಾಂಧೀನಗರ ಎ ಎಚ್ ಪ್ಯಾಲೇಸ್ ಹಾಲ್‌ನಲ್ಲಿ ಜರುಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮ ದಲ್ಲಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತು ಮಾಜಿ ಸ್ದಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿ ದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎ.ಪ್ರಕಾಶ್ ನಾಯ್ಕ್, ಕಂಚಿಲ ಮೊಹಮ್ಮದ್, ಕೆ.ಸದಾಶಿವ, ಎಸ್.ಅಬ್ದುಲ್ ಖಾದರ್ ಹಾಜಿ, ಸಂಕ ಬೈಲು ಸತೀಶ ಅಡಪ್ಪ, ಮೊಹಮ್ಮದ್ ಹನೀಫ್ ಎಚ್.ಎ, ಉಮ್ಮರ್ ಕುಂಞ, ವಿನೋದ್ ಕುಮಾರ್.ಪಿ, ಬಿ.ಕೆ ಮೊಹಮ್ಮದ್, ರಝಾಕ್ ಹಾಜಿ, ವಿಕ್ಟರ್ ವೇಗಸ್, ಹಮೀದ್ ಬೋ ರ್ಕಳ, ಅಹಮದ್ ಮನ್ಸೂರ್, ಕಾಯಿಂಞ ಹಾಜಿ ತಲೇಕಳ, ಉಮ್ಮರ್ ಬೆಜ್ಜ, ಶರ್ಮಿಳಾ ಪಿಂಟೋ, ಜೋಕಿಂ ಮೊಂತೇರೋ, ಶೇಕ್ ಅಬ್ಬಾಸ್, ಫೀಲೋಮಿನ ಮೊಂತೇ ರೋ, ಶಾಫಿ ತಲೇಕಳ, ಮೊಹಮ್ಮದ್ ಕೆದುಂಬಾಡಿ, ಲತೀಫ್ ಕುಳಬೈಲು, ಖಾಜಾ ಸಾಹೇಬ್, ಸಿದ್ದೀಕ್ ದೈಗೋಳಿ, ಬಿಜು ಸೆಬಾಸ್ಟಿಯನ್, ಮೊಹಮ್ಮದ್ ಬೆಜ್ಜ, ಅಶ್ರಫ್ ಗಾಂಧೀನಗರ, ಪಳ್ಳಿಕುಂಞ ತಲೇಕಳ, ಶಶಿಧರ ನಾಯ್ಕ್, ಅಬ್ದುಲ್ಲ ಟಿ, ಅಬೂಸಾಲಿ, ಹಮೀದ್ ಕಣಿಯೂರು, ಹನೀಫ್ ಕುಮೇರ್, ಅಬೂಬಕ್ಕರ್ ಬಟ್ಯಪದವು ಮುಂತಾದವರು ಭಾಗವಹಿಸಿದರು.
ಪೈವಳಿಕೆ : ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜರು ಗಿದ ಕಾರ್ಯಕ್ರಮದಲ್ಲಿ ಉಮ್ಮನ್ ಚಾಂಡಿಯವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕುಂ ಬಳೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್, ಬ್ಲಾಕ್ ಕಾರ್ಯ ದರ್ಶಿ ರಾಘವೇಂದ್ರ ಭಟ್, ಐ.ಎನ್.ಟಿ.ಯು.ಸಿ ಬ್ಲಾಕ್ ಮುಂ ದಾಳು ಶಾಜಿ , ಐ.ಎನ್.ಟಿ.ಯು.ಸಿ ಮಂಡಲ ಅಧ್ಯಕ್ಷ ಪೀಟರ್ ಡಿಸೋಜ, ಶಿವರಾಮ ಶೆಟ್ಟಿ, ಶಬೀರ ಮದನಕೋಡಿ, ಅಬ್ದುಲ್ಲ ಹಾಜಿ, ಸಂತೋಷ ಡಿಸೋಜ, ಜೀವನ್ ಕಯ್ಯಾರು, ಎಡ್ವರ್ಡ್ ಪೈವಳಿಕೆ, ಸುಬ್ರಾಯ ಸಾಯ ಮುಂತಾದವರು ಭಾಗವಹಿಸಿದರು.