ಮುಂದಿನ ಐದು ದಿನಗಳೊಳಗಾಗಿ ರಾಜ್ಯಕ್ಕೆ ಮುಂಗಾರು
ಕಾಸರಗೋಡು: ಮುಂದಿನ ಐದು ದಿನಗಳೊಳಗಾಗಿ ಕೇರಳಕ್ಕೆ ನೈಋತ್ಯ ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ವರ್ಷ ಲಭಿಸಿದ ಮುಂಗಾರು ಮಳೆಗಿಂತ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಮಳೆ ಕೇರಳದಲ್ಲಿ ಸುರಿಯಲಿದೆ. ಅಂದರೆ ಕಳೆದ ಬಾರಿಗಿಂತ ಶೇಕಡಾ 106ರಷ್ಟು ಹೆಚ್ಚು ಮಳೆ ಈ ಸಲ ಲಭಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ- ಸಪ್ಟೆಂಬರ್ ತಿಂಗಳ ಮಧ್ಯೆ ಅತೀ ಹೆಚ್ಚು ಮಳೆ ಲಭಿಸಲಿದೆ.
ಮಳೆ ಪ್ರಮಾಣ ಕುಸಿಯಲು ಕಾರಣವಾಗುತ್ತಿರುವ ಫೆಸಿಫಿಕ್ ಸಾಗರದ ಎಲ್‌ನಿನೋ ಎಂಬ ಪ್ರಾಕೃತಿಕ ಚಮತ್ಕಾರ ಈಗ ದುರ್ಬಲಗೊಳ್ಳತೊಡ ಗಿದ್ದು, ಅದು ಈ ಬಾರಿ ಹೆಚ್ಚು ಮಳೆ ಲಭಿಸಲು ದಾರಿ ಮಾಡಿಕೊಡದೆ ಎಂದೂ ಇಲಾಖೆ ತಿಳಿಸಿದೆ.
ಮುಂಗಾರು ಮಳೆ ಸುರಿಯಲು ಇನ್ನೇನು ಐದು ದಿನಗಳು ಇರುವಂತೆಯೇ, ರಾಜ್ಯದಲ್ಲಿ ಈಗ ಸುರಿಯುತ್ತಿರುವ ಬೇಸಿಗೆ ಮಳೆ ಇನ್ನೂ ಮುಂದುವರಿಯಲಿದೆ. ರಾಜ್ಯದ ಕೆಲವೆಡೆಗಳಲ್ಲಿ ಭಾರೀ ಮಳೆ ಸುರಿಯವ ಸಾಧ್ಯತೆ ಇದೆ. ಇದರ ಜತೆಗೆ ಬಿರುಗಾಳಿ ಮತ್ತು ಸಿಡಿಲು ಉಂಟಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.