ಮುಂದಿನ ಬಾರಿ ಸಿಪಿಎಂ ಚಿಪ್ಪು ಹಂದಿಯ ಚಿಹ್ನೆಯಲ್ಲಿ ಸ್ಪರ್ಧಿಸಬೇಕಾದೀತು-ಎ.ಪಿ. ಅಬ್ದುಲ್ಲಕುಟ್ಟಿ
ಬೋವಿಕ್ಕಾನ: ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಸಿಪಿಎಂಗೆ ಚಿಪ್ಪುಹಂದಿ ಚಿಹ್ನೆಯಲ್ಲಿ ಸ್ಪರ್ಧಿಸಬೇಕಾಗಿ ಬಂದೀತೆಂದು ಬಿಜೆಪಿ ಕೇಂದ್ರ ಉಪಾ ಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಹೇಳಿದ್ದಾರೆ.
ಬೋವಿಕ್ಕಾನದಲ್ಲಿ ನಿನ್ನೆ ನಡೆದ ಎನ್‌ಡಿಎ ಉದುಮ ವಿಧಾನಸಭಾ ಕ್ಷೇತ್ರದ ಚುನಾವಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿ ದ್ದರು. ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳುವ ವೇಳೆ ಸಿಪಿಎಂಗೆ ರಾಷ್ಟ್ರೀಯ ಪಕ್ಷವೆಂಬ ಸ್ಥಾನಮಾನ ನಷ್ಟಹೊಂದಲಿದೆ. ಅದರಿಂದಾಗಿ ಮುಂದೆ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಸಿಪಿಎಂ ನೇತಾರರು ಚಿಪ್ಪುಹಂದಿ ಚಿಹ್ನೆಯಲ್ಲಿ ಸ್ಪರ್ಧಿಸಬೇಕಾಗಿ ಬರಲಿದೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಪ್ರಧಾನ ಮಂತ್ರಿ ಮೋದಿಯವರು ಹೇಳಿಕೆ ನೀಡಿದ ಬೆನ್ನಲ್ಲೇ ಗುಪ್ತಚರ ವಿಭಾಗ ಹಾಗೂ ಸುದ್ದಿ ಮಾಧ್ಯಮಗಳು ಅದೇ ರೀತಿಯ ಸಮೀಕ್ಷಾ ವರದಿ ಮಾಡಿದೆ.
ಪಶ್ಚಿಮ ಬಂಗಾಲದ ಹಾಗೆ ಕೇರಳದಲ್ಲೂ ಸಿಪಿಎಂ ಶೂನ್ಯವಾಗಲಿದೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಕಳೆದ ಚುನಾವಣೆಯಲ್ಲಿ ಅಮೇಠಿ ಯಿಂದ ವಯನಾಡ್‌ಗೆ ಬಂದ ಹಾಗೆ ಈ ಚುನಾವಣೆ ಕಳದ ಬಳಿಕ ಅವರು ಇಟೆಲಿಗೆ ಪಲಾಯನಗೈಯ ಬೇಕಾಗುವ ಸ್ಥಿತಿ ಉಂಟಾಗಲಿದೆಯೆಂದು ಅವರು ಹೇಳಿದ್ದಾರೆ.ಎನ್‌ಡಿಎ ಉದುಮ ಮಂಡಲ ಅಧ್ಯಕ್ಷ ಕೆ.ಟಿ. ಪುರುಷೋತ್ತಮನ್ ಅಧ್ಯಕ್ಷತೆ ವಹಿಸಿದರು. ಪ್ರಮೀಳಾ ಸಿ. ನಾಯ್ಕ್, ಕೆ. ರಂಜಿತ್ ಮುಳಿಯಾರು, ಮಂಡಲ ಅಧ್ಯಕ್ಷ ಮಹೇಶ್ ಗೋಪಾಲ್, ಪ್ರಧಾನ ಕಾರ್ಯದರ್ಶಿ ದಿಲೀಪ್ ಪಳ್ಳಿಕ್ಕೆರೆ ಸೇರಿದಂತೆ ಹಲವರು ಭಾಗವಹಿಸಿ ಮಾತಾಡಿದರು