ಮುಂದಿನ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಒಂದು ತೋರು ಬೆರಳು: ನಿಲಂಬೂರು ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಜೂನ್ 19ರಂದು
ತಿರುವನಂತಪುರ: ನಿಲಂಬೂರು ವಿಧಾನಸಭಾ ಕ್ಷೇತ್ರದ ಎಡರಂಗ ಬೆಂಬಲಿತ ಶಾಸಕರಾಗಿದ್ದ ಪಿ.ವಿ. ಅನ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ತೆರವುಗೊಂಡಿರುವ ಆ ಸ್ಥಾನಕ್ಕೆ ಜೂನ್ 19ರಂದು ಉಪಚುನಾವಣೆ ನಡೆಯಲಿದೆ. ಇದರ ಫಲಿತಾಂಶ ಮುಂದೆ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ವಿಧಾನಸಭಾ ಚುನಾವಣೆಗಿರುವ ಒಂದು ತೋರು ಬೆರಳು ಕೂಡಾ ಆಗಲಿದೆ.
ಆದ್ದರಿಂದ ಈ ಉಪಚುನಾವಣೆಯ ಫಲಿತಾಂಶ ಆಡಳಿತ ಹಾಗೂ ವಿಪಕ್ಷ ಗಳಿಗೂ ಅತ್ಯಂತ ನಿರ್ಣಾಯಕವಾಗಲಿದೆ. ಆ ಹಿನ್ನೆಲೆಯಲ್ಲಿ ಆ ಕ್ಷೇತ್ರವನ್ನು ತನ್ನ ಕೈಯಲ್ಲೇ ಉಳಿಸಿಕೊಳ್ಳಲು ಒಂದೆಡೆ ಎಡರಂಗ ಯತ್ನಿಸುತ್ತಿದ್ದರೆ, ಇನ್ನೊಂದೆಡೆ ಅದನ್ನು ಕಸಿದುಕೊಳ್ಳಲು ಯುಡಿಎಫ್ ಶತ ಪ್ರಯತ್ನದಲ್ಲಿ ತೊಡಗಿದೆ. ನಿಲಂಬೂರು ಉಪ ಚುನಾವಣೆಯ ಜೊತೆಗೆ ಗುಜರಾತ್ನ ಎರಡು ಮತ್ತು ಪಂಜಾಬ್ ಹಾಗೂ ಪಶ್ಚಿಮ ಬಂಗಾಳದ ತಲಾ ಒಂದು ವಿಧಾನಸಭಾ ಕ್ಷೇತ್ರಗ ಳಿಗೂ ಉಪಚುನಾವಣೆ ನಡೆಯಲಿದೆ.
ಜೂನ್ 2ರ ತನಕ ನಾಮಪತ್ರ ಸಲ್ಲಿಸಬಹುದು. ಜೂನ್ 3ರಂದು ಅದರ ಸೂಕ್ಷ್ಮ ಪರಿಶೀಲನೆ ನಡೆಯಲಿದೆ. ಜೂನ್ 5 ನಾಮಪತ್ರ ಸಲ್ಲಿಕೆಯ ಹಿಂತೆಗೆಯುವ ಕೊನೆಯ ದಿನಾಂಕವಾಗಿದೆ. ಜೂನ್ 19ರಂದು ಚುನಾವಣೆ ನಡೆಯಲಿದ್ದು, ನಂತರ ಜೂನ್ 23ರಂದು ಮತ ಎಣಿಕೆ ನಡೆಯಲಿದೆ. 2021ರಲ್ಲಿ ನಡೆದ ಚುನಾವಣೆಯಲ್ಲಿ ನಿಲಂಬೂರು ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗ ಬೆಂಬಲಿತ ಅಭ್ಯರ್ಥಿ ಪಿ.ವಿ. ಅನ್ವರ್ 81,227 (ಶೇ46) ಮತಗಳು ಹಾಗೂ ಯುಡಿಎಫ್ (ಕಾಂಗ್ರೆಸ್)ನ ಪ್ರಕಾರ ವಿ.ವಿ. ಪ್ರಕಾಶ್ರಿಗೆ 78,527 (ಶೇ. 45.33) ಮತಗಳು ಲಭಿಸಿತ್ತು. ಬಿಜೆಪಿಯ ಟಿ.ಕೆ. ಅಶೋಕ್ ಕುಮಾರ್ಗೆ 8,595 (ಶೇ. 4.96) ಮತ ಲಭಿಸಿತ್ತು. ಇದರಲ್ಲಿ ಪಿ.ವಿ. ಅನ್ವರ್ 2,700 ಮತಗಳ ಅಂತರದಿAದ ಗೆದ್ದಿದ್ದರು.