ಮುಂದುವರಿದ ಸರ ಎಗರಿಸುವ ಕೃತ್ಯ: ಯುವತಿ ಬೊಬ್ಬೆ ಹಾಕಿದಾಗ ದುಷ್ಕರ್ಮಿ ಕೃತ್ಯ ಉಪೇಕ್ಷಿಸಿ ಪರಾರಿ

ಕಾಸರಗೋಡು: ರಸ್ತೆಯಲ್ಲಿ ನಡೆದು ಹೋಗುವ ಮಹಿಳೆಯರ ಕುತ್ತಿಗೆಯಿಂದ ಸರ ಎಗರಿಸುವ ಕೃತ್ಯ ಇದೀಗ ನಿತ್ಯ ಘಟನೆಯಾಗಿ ಮಾರ್ಪಾಡುಗೊಂಡಿದೆ. ನಿನ್ನೆ ಸಂಜೆ ಇಂತಹುದೇ ಘಟನೆ ನಡೆದಿದ್ದು, ಆದರೆ ದುಷ್ಕರ್ಮಿ ಪರಾ ಭವಗೊಂಡು ಪರಾರಿಯಾಗಿದ್ದಾನೆ. ನಿನ್ನೆ ಸಂಜೆ ೫.೧೫ರ ವೇಳೆ ಮೇಲ್ಪರಂಬ ಸಮೀಪ ದೇಳಿಯಲ್ಲಿ ಈ ಘಟನೆ ನಡೆದಿದೆ.  ೨೫ರ ಹರೆಯದ ಯುವತಿ ನಡೆದು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿ ಆಕೆಯ ಕುತ್ತಿಗೆಗೆ ಕೈ ಹಾಕಿ  ಚಿನ್ನದ ಸರ ಎಗರಿಸಲು ಯತ್ನಿಸಿದ್ದಾನೆ. ಇದನ್ನರಿತ ಯುವತಿ ಬೊಬ್ಬೆ ಹಾಕಿದ್ದು, ಅಷ್ಟರಲ್ಲಿ  ದುಷ್ಕರ್ಮಿ ಯತ್ನ ಉಪೇಕ್ಷಿಸಿ ಪರಾರಿ ಯಾಗಿದ್ದಾನೆ.  ಒಂದೆಡೆ ಸರ ಕಳ್ಳರ ಪತ್ತೆಗಾಗಿ ಪೊಲೀಸರು  ತೀವ್ರ ಶೋಧ ನಡೆಸುತ್ತಿರುವಂತೆ ಮತ್ತೊಂದೆಡೆ ಇಂತಹುದೇ ಕೃತ್ಯ ಮುಂದುವರಿಯುತ್ತಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ. ಮೇಲ್ಪರಂಬ ಠಾಣೆ ವ್ಯಾಪ್ತಿಯಲ್ಲಿ ಒಂದು ತಿಂಗಳೊಳಗೆ ಇಂತಹ ೮ ಪ್ರಕರಣ ನಡೆದ ಬಗ್ಗೆ ಹೇಳಲಾಗುತ್ತಿದೆ.

You cannot copy contents of this page