ಮುಂದುವರಿಯುತ್ತಿರುವ ‘ಆಪರೇಶನ್ ಅಖಾಲ್’ : ಇಬ್ಬರು ಯೋಧರ ವೀರ ಮೃತ್ಯು: ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಸೇನೆ
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದರನ್ನು ನಿರ್ಮೂಲನೆಗೊಳಿ ಸಲು ಭಾರತೀಯ ಸೇನಾ ಪಡೆ ಆಪರೇಶನ್ ಅಖಾಲ್ ಎಂಬ ಹೆಸರಲ್ಲಿ ಆರಂಭಿಸಿರುವ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನಾ ಪಡೆಯ ಇಬ್ಬರು ಜವಾನರು ವೀರ ಮೃತ್ಯು ಹೊಂದಿದ್ದಾರೆ. 9 ಸೈನಿಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಭಾರತೀಯ ಸೇನಾ ಪಡೆಯ ಲ್ಯಾನ್ಸ ನಾಯಕ್ ಪ್ರಿತ್ವಾಲ್ ಸಿಂಗ್ ಮತ್ತು ಸಿಪಾಯಿ ಹರ್ಮಿಂದರ್ ಸಿಂಗ್ ಈ ಕಾರ್ಯಾಚರಣೆಯಲ್ಲಿ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಈ ಗುಂಡಿನ ಚಕಮಕಿ ನಡೆದಿದೆ. ಭ ಯೋತ್ಪಾದಕರ ವಿರುದ್ಧ ನಡೆಸಲಾಗಿರುವ ಈ ಕಾರ್ಯಾಚರಣೆ ಯನ್ನು ಭದ್ರತಾ ಪಡೆ ಇನ್ನಷ್ಟು ತೀವ್ರಗೊಳಿಸಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಮ್ಮ ಧೈರ್ಯಶಾಲಿಗಳಾದ ಪ್ರಿತ್ವಾಲ್ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಅವರ ಅತ್ಯುನ್ನತ ತ್ಯಾಗವನ್ನು ಭಾರತೀಯ ಸೇನೆ ಗೌರವಿಸುತ್ತಿದೆ. ಅವರ ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತ ಸ್ಪೂರ್ತಿ ನೀಡುತ್ತಿದೆ. ಮೃತರ ಕುಟುಂಬಗಳಿಗೆ ಭಾರತೀಯ ಸೇನೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ನಾವು ಎಂದೂ ಆ ಕುಟುಂಬದ ಜತೆಗಿದ್ದೇವೆ. ಭಯೋತ್ಪಾದಕರನ್ನು ಹುಡುಕಿ ಅವರನ್ನು ಇತಿಶ್ರೀಗೊಳಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದೆಂದು ಇದೇ ಸಂದರ್ಭದಲ್ಲಿ ಭಾರತೀಯ ಸೇನೆ ತಿಳಿಸಿದೆ.