ಮುಂದುವರಿಯುತ್ತಿರುವ ಕಡಲ್ಕೊರೆತ: ಪೆರಿಂಗಡಿ ಸಹಿತ ವಿವಿಧ ಪ್ರದೇಶದಲ್ಲಿ ರಸ್ತೆ ಸಮುದ್ರಪಾಲು
ಉಪ್ಪಳ: ಕಳೆದ ಹಲವು ದಿನ ಗಳಿಂದ ಮಳೆ, ಗಾಳಿ ಬಿರುಸು ಗೊಂಡಿರುವAತೆ ಕಡಲ್ಕೊರೆತ ಮುಂದುವರಿಯುದ್ದು, ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಬೀಚ್ ರಸ್ತೆ ಸಮುದ್ರ ಪಾಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಯಿಂದ ವ್ಯಾಪಕಗೊಂಡ ಕಡಲ್ಕೊರೆತದಿಂದ ಪೆರಿಂಗಡಿಯಲ್ಲಿ ರಸ್ತೆ, ಹಲವಾರು ಮರಗಳು ಸಮುದ್ರ ಪಾಲಾಗುತ್ತಿದೆ. ವಿದ್ಯುತ್ ಕಂಬಗಳು ಧರಾಶಾಯಿಯಾಗುವ ಭೀತಿಯಿದೆ. ಹಲವು ಮನೆಗಳು ಅಪÁಯದಂಚಿನಲ್ಲಿದೆ. ಈಗಾಗಲೇ ಹನುಮಾನ್ ನಗರದಲ್ಲಿ ರಸ್ತೆ ಸಮುದ್ರಪಾಲಾಗಿದ್ದು, ಮಣಿಮುಂಡ, ಮೂಸೋಡಿಯಲ್ಲಿ ಮನೆಗಳು ಅಪಾಯದಂಚಿನಲ್ಲಿದೆ. ಐಲ ಶಿವಾಜಿನಗರದಲ್ಲಿ ಫಿಶರೀಸ್ ಶೆಡ್ಡ್, ಶ್ರೀ ಶಾರದೋತ್ಸವ, ಶ್ರೀ ಗಣೇಶೋತ್ಸವದ ಕಟ್ಟೆ, ಮರಗಳು ಸಮುದ್ರ ಪಾಲಾಗಿದೆ. ಈ ಪರಿಸರದ ಕುದುಪುಳು, ಬಂಗ್ಲೆ ಎಂಬಲ್ಲಿ ರಸ್ತೆ ಸಮುದ್ರ ಪಾಲಾಗುವ ಭೀತಿಯಿದೆ. ಪ್ರದೆಶಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ತಡೆಗೋಡೆ ನಿರ್ಮಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.