ಮುಂಬೈ ದಾಳಿ ಆರೋಪಿ ತಹವೂರ್ ರಾಣ ಕೊಚ್ಚಿಗೆ ಭೇಟಿ ನೀಡಿದ ಉದ್ದೇಶ: ಸಮಗ್ರ ತನಿಖೆಗೆ ಎನ್‌ಐಎ ನಿರ್ಧಾರ
ಕೊಚ್ಚಿ: ಅಮೆರಿಕಾದಿಂದ ಮೊನ್ನೆ ಭಾರತಕ್ಕೆ ತಲುಪಿಸಿದ ಮುಂಬೈ ದಾಳಿ ಪ್ರಕರಣದ ಆರೋಪಿ ತಹವೂರ್ ರಾಣ ಕೊಚ್ಚಿಗೆ ಭೇಟಿ ನೀಡಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಆ ಕುರಿತಾಗಿ ತನಿಖೆ ನಡೆಸಲು ಎನ್‌ಐಎ ನಿರ್ಧರಿಸಿದೆ. ತಹವೂರ್ ರಾಣನನ್ನು ಸಮಗ್ರ ತನಿಖೆಗೊಳಪಡಿಸಿದರೆ ನಿರ್ಣಾಯಕ ಮಾಹಿತಿ ಲಭಿಸಬ ಹುದೆಂದು ತನಿಖಾ ತಂಡ ನಿರೀಕ್ಷೆಯಿರಿಸಿದೆ.
ಮುಂಬೈ ಭಯೋತ್ಪಾದನಾ ದಾಳಿಯ ಒಂದು ವಾರಹಿಂದೆಯಷ್ಟೇ ರಾಣ ಕೊಚ್ಚಿಗೆ ತಲುಪಿದ್ದನು. 2008 ನವಂಬರ್ 26ರಂದು ಮುಂಬೈಯಲ್ಲಿ ಉಗ್ರರ ದಾಳಿ ನಡೆದಿದ್ದು, ಇದರಲ್ಲಿ 170ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ನವಂಬರ್ 26ರಂದು ರಾಣ ಕೊಚ್ಚಿಗೆ ತಲುಪಿದ್ದನು. ಅಲ್ಲಿನ ತಾಜ್ ಹೋಟೆಲ್‌ನಲ್ಲಿ ತಂಗಿದ್ದ ರಾಣ ಕೊಚ್ಚಿನ್ ಪೋರ್ಟ್ ಟ್ರಸ್ಟ್, ಶಿಪ್‌ಯಾರ್ಡ್ ಸಹಿತ ಪ್ರಧಾನ ಸ್ಥಳಗಳನ್ನು ಸಂದರ್ಶಿಸಿದ್ದನೆಂದು ತನಿಖಾ ತಂಡ ಈ ಹಿಂದೆಯೇ ತಿಳಿದುಕೊಂಡಿದೆ.
ರಾಣ ಕೊಚ್ಚಿಗೆ ಭೇಟಿ ನೀಡಿರುವುದರ ಉದ್ದೇಶವೇನು, ಅಲ್ಲಿ ಯಾರನ್ನು ಭೇಟಿಯಾಗಿದ್ದಾನೆ, ಅದಕ್ಕಾಗಿ ಅಲ್ಲಿನ ಯಾರದ್ದಾದರೂ ಸಹಾಯ ಲಭಿಸಿತ್ತೇ ಎಂದು ಎನ್‌ಐಎ ತನಿಖೆ ನಡೆಸಲಿದೆ. ತನಿಖೆಯಲ್ಲಿ ಈ ಕುರಿತಾಗಿ ಸ್ಪಷ್ಟ ಮಾಹಿತಿ ಲಭಿಸಬಹುದೆಂದು ಪ್ರಕರಣದ ತನಿಖಾ ಅಧಿಕಾರಿಯಾಗಿದ್ದ ನಿವೃತ್ತ ಡಿಜಿಪಿ ಲೋಕನಾಥ್ ಬೆಹ್ರಾ ಕೂಡಾ ತಿಳಿಸಿದ್ದಾರೆ. ರಾಣ ಕೊಚ್ಚಿಗೆ ಭೇಟಿ ನೀಡಿರುವುದರ ಕುರಿತು ಸ್ಪಷ್ಟ ಪುರಾವೆಗಳು ಎನ್‌ಐಎಗೆ ಲಭಿಸಿತ್ತು. ಈ ಬಗ್ಗೆ ತನಿಖೆ ನಡೆಸಿದ್ದರೂ ಅಷ್ಟರಲ್ಲಿ ರಾಣ ದೇಶದಿಂದ ಪಲಾಯನ ಗೈದಿರುವುದರಿಂದ ತನಿಖೆ ಮುಂದುವರಿ ಯಲಿಲ್ಲ. ಆದರೆ ಇದೀಗ ರಾಣನನ್ನು ಭಾರತಕ್ಕೆ ಹಸ್ತಾಂತರಿಸಿರುವುದರಿಂದ ಈ ಕುರಿತಾಗಿ ತನಿಖೆ ಮುಂದುವರಿಸಲು ಸಾಧ್ಯವಿದೆಯೆಂದು ಅವರು ತಿಳಿಸಿದ್ದಾರೆ. ಅಮೆರಿಕಾದಿಂದ ಪ್ರತ್ಯೇಕ ವಿಮಾನದಲ್ಲಿ ಭಾರತಕ್ಕೆ ತಲುಪಿಸಿದ ರಾಣನನ್ನು ನ್ಯಾಯಾಲಯ 8 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಬಿಟ್ಟುಕೊಟ್ಟಿದೆ. ಮುಂಬೈಗೆ ಸಮಾನವಾದ ದಾಳಿಯನ್ನು ದೇಶದ ವಿವಿಧ ನಗರಗಳಲ್ಲಿ ನಡೆಸಲು ರಾಣ ಯೋಜನೆ ಹಾಕಿಕೊಂಡಿದ್ದನೆಂದು ಎನ್‌ಐಎ ನ್ಯಾಯಾಲಯದಲ್ಲಿ ತಿಳಿಸಿದೆ. ಮುಂಬೈ ದಾಳಿಗೆ ಸಂಬಂಧಿಸಿದ ಗೂಢಾಲೋಚನೆಗಳನ್ನು ಬೆಳಕಿಗೆ ತರಲು ರಾಣನನ್ನು ಸಮಗ್ರ ತನಿಖೆಗೊಳ ಪಡಿಸಬೇಕಿದೆ. ಆ ಮೂಲಕ ಇತರ ನಗರಗಳಲ್ಲಿ ದಾಳಿಗೆ ಹಾಕಿಕೊಂಡ ಯೋಜನೆ ಕುರಿತು ನಿರ್ಣಾಯಕ ಮಾಹಿತಿಗಳು ರಾಣನಿಂದ ಲಭಿಸಬಹು ದೆಂದು ಎನ್‌ಐಎ ಅಂದಾಜಿಸಿದೆ.