ಮುಕ್ತ ಹಾಗೂ ನಿರ್ಭಯ ಚುನಾವಣೆ ಖಚಿತಪಡಿಸಲು ವೆಚ್ಚ ನಿರೀಕ್ಷಕರ ಭೇಟಿ
ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮುಕ್ತ ಹಾಗೂ ನಿರ್ಭೀತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು, ಅನಧಿಕೃತ ಹಣದ ವ್ಯವಹಾರವನ್ನು ತಡೆಗಟ್ಟಲು ಕಾಸರಗೋಡು ಸಂಸದೀಯ ಕ್ಷೇತ್ರಕ್ಕೆ ಚುನಾವಣಾ ವೆಚ್ಚ ನಿರೀಕ್ಷಕರಾಗಿ ಆನಂದ್‌ರಾಜ್‌ರನ್ನು ಕೇಂದ್ರ ಚುನಾವಣಾ ಆಯೋಗವನ್ನು ಚುನಾವಣಾ ಆಯೋಗ ವೆಚ್ಚ ನಿರೀಕ್ಷಕ ಅಧಿಕಾರಿಯಾಗಿ ನೇಮಕಗೊಳಿಸಿದೆ. ಇವರು ವಿದ್ಯಾನಗರ ಜಿಲ್ಲಾ ಮಾಹಿತಿ ಕಚೇರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾಮಟ್ಟದ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದರು. ವಿವಿಧ ಮುದ್ರಣ ದೃಶ್ಯ ಮತ್ತು ಡಿಜಿಟಲ್ ಮಾಧ್ಯಮ ಕಾರ್ಯಕರ್ತರಿಂದ ಮಾಹಿತಿ ಪಡೆದರು.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿದ್ದು, ಅವರು ಅಧ್ಯಕ್ಷತೆ ವಹಿಸಿದರು. ಅಭ್ಯರ್ಥಿಗಳು ಪ್ರಚಾರಕ್ಕಾಗಿ ಚುನಾವಣಾ ಆಯೋಗ ನಿಗದಿಪಡಿಸಿದ ೯೫ ಲಕ್ಷ ರೂ.ಗಿಂತಲೂ ಹೆಚ್ಚು ಖರ್ಚು ಮಾಡುವುದರ ಬಗ್ಗೆ ನಿಗಾ ವಹಿಸಲು ಸ್ಟಾಟಿಸ್ಟಿಕ್ಸ್ ಸರ್ವಲೆನ್ಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ವೀಕ್ಷಣಾ ತಂಡ, ಪೊಲೀಸ್, ಅಬಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆ, ಲೆಕ್ಕಪತ್ರ ಇಲಾಖೆಗಳು ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ಗಡಿ ಪ್ರದೇಶಗಳಲ್ಲಿ ನಿರೀಕ್ಷಣೆ ಬಲಪಡಿಸಬೇಕು, ಅಗತ್ಯವಿದ್ದರೆ ಹೆಚ್ಚು ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕೆಂದು ಆನಂದ್‌ರಾಜ್ ಸೂಚಿಸಿದರು.
ನೋಡೆಲ್ ಅಧಿಕಾರಿ ವಿ. ಚಂದ್ರನ್ ಭಾಗವಹಿಸಿದರು.ವಿವಿಧ ಮಂಡಲಗಳ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.